ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿ ಗಣೇಶ ಹುಕ್ಕೇರಿ, ನಿಪ್ಪಾಣಿ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಪರ ಖರ್ಗೆ ಮತಯಾಚನೆ ಮಾಡಿದರು., ಮೋದಿ ಅವರಿಗೆ ದಲಿತರ ಮೇಲೆ ನಿಜವಾದ ಪ್ರೀತಿಯೇ ಇಲ್ಲ, ಲೋಕಸಭೆಯಲ್ಲಿ ತನಗೆ ವಿರೋಧ ಪಕ್ಷದ ಸ್ಥಾನ ಮಾನಕ್ಕೆ ಮೋದಿ ವಿರೋಧಿಸಿದ್ದರು. ಒಬ್ಬ ದಲಿತನಾಗಿರುವ ತನಗೆ ವಿರೋಧ ಪಕ್ಷದ ಸ್ಥಾನ ಮಾನಕ್ಕೆ ವಿರೋಧಿಸಿದ್ದರಿಂದ ಹಾಗಾಗಿ ದಲಿತರ ಪರ ಮಾತನಾಡುವ ನೈತಿಕತೆ ಮೋದಿಗೆ ಇಲ್ಲ,
ಈ ಬಾರಿ ನಡೆಯುತ್ತಿರುವ ಚುನಾವಣೆ ಬರಿ ಪಕ್ಷಗಳ ನಡುವಿನ ಚುನಾವಣೆ ಅಲ್ಲ. ಎರಡು ತತ್ವ ಸಿದ್ದಾಂತಗಳ ನಡುವಿನ ಚುನಾವಣೆ. ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಯಡಿಯೂರಪ್ಪ ಅವರನ್ನು ಘೋಷಣೆ ಮಾಡಿ, ಇದೀಗ ಮೋದಿ ಬಂದು ನನಗೆ ವೋಟ್ ನೀಡಿ ಅಂತಿದ್ದಾರೆ. ನಮಗೆ ಅರ್ಥವಾಗುತ್ತಿಲ್ಲ ಮೋದಿಯವರು ಇಲ್ಲಿಗೆ ಬಂದು ಮುಖ್ಯಮಂತ್ರಿಯಾಗುವವರಿದ್ದಾರಾ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಸಾಲ ಮನ್ನಾ ಮಾಡಿ ಅಂದ್ರೆ ನಮ್ಮಲ್ಲಿ ನೋಟ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಅಂದ್ರು. ಆದ್ರೆ ನಾವು ಇವತ್ತು ಸಾಲ ಮನ್ನಾ ಮಾಡಿದ್ದೆವೆ. ದೇಶದಲ್ಲಿ ಹೂಡಿಕೆ ವಿಚಾರದಲ್ಲಿ ನಾವು ನಂ 1 ಸ್ಥಾನ ಪಡೆದಿದ್ದೇವೆ.. ಗುಜರಾತ್ ಮಾಡೆಲ್ ಅಂತಿದ್ದ ನೀವು ಹಿಂದೆ ಉಳಿದಿದ್ದಿರಿ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಆದ್ರೆ ಕರ್ನಾಟಕದಲ್ಲಿ ನಮ್ಮ ಸರ್ಕಾರ 55. ಲಕ್ಷ ಉದ್ಯೋಗ ನೀಡಿದ್ದೇವೆ ಎಂದು ಟಾಂಗ್ ನೀಡಿದರು.