ಮಹಿಳೆಯ ದೇಹದಲ್ಲಿ ಮಂಕಿಪಾಕ್ಸ್ ಪತ್ತೆ!

ಗುರುವಾರ, 4 ಆಗಸ್ಟ್ 2022 (07:53 IST)
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 31 ವರ್ಷ ವಯಸ್ಸಿನ ಮಹಿಳೆಯಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ.
 
ಈ ಮೂಲಕ ದೆಹಲಿಯಲ್ಲಿ ಈವರೆಗೆ ಒಟ್ಟು 4 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು 9ನೇ ಪ್ರಕರಣವಾಗಿದೆ. ದೆಹಲಿಯಲ್ಲಿ ಮಂಕಿಪಾಕ್ಸ್ ದೃಢಗೊಂಡ ಮಹಿಳೆ ಇತ್ತಿಚೇಗೆ ವಿದೇಶದಿಂದ ವಾಪಸ್ಸಾಗಿದ್ದರು.

ಆ ಬಳಿಕ ಜ್ವರ ಮತ್ತು ಮೈ ಕೈನಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದೆ. ಮಂಕಿಪಾಕ್ಸ್ ಪತ್ತೆಯಾದ ಮಹಿಳೆಯನ್ನು ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ದೆಹಲಿಯ 35 ವರ್ಷದ ಪುರುಷನಿಗೆ ಮಂಕಿಪಾಕ್ಸ್ ಇರುವುದು ಪತ್ತೆಯಾಗಿತ್ತು. ಆದರೆ ಈತನಿಗೆ ಯಾವುದೇ ವಿದೇಶ ಪ್ರಯಾಣದ ಲಿಂಕ್ ಇರಲಿಲ್ಲ. ಆದರೂ ಸೋಂಕು ಕಾಣಿಸಿಕೊಂಡಿತ್ತು. ದೇಶದಲ್ಲಿ ಕಾಣಿಸಿಕೊಂಡ ಎಲ್ಲಾ 9 ಪ್ರಕರಣಗಳು ಕೇರಳ ಮತ್ತು ದೆಹಲಿಯಲ್ಲಿ ಪತ್ತೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ