ಭಾರತದ ಮೊದಲ ಮಂಕಿಪಾಕ್ಸ್ ಕಾಯಿಲೆಯಿಂದ ಸಾವು

ಸೋಮವಾರ, 1 ಆಗಸ್ಟ್ 2022 (17:07 IST)
ಕೇರಳದ ತ್ರಿಶೂರ್‌ನಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಕಾಯಿಲೆಯ ಸಾವು ವರದಿಯಾಗಿದೆ. ಚಾವಕ್ಕಾಡ್‌ನ ಕುರಿನಿಯೂರು ಮೂಲದ 22 ವರ್ಷದ ಯುವಕನೋರ್ವ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪುಣೆ ವೈರಾಲಜಿ ಲ್ಯಾಬ್‌ನ ಫಲಿತಾಂಶ ದೃಢಪಡಿಸಿದೆ.
 
ಮೃತ ವ್ಯಕ್ತಿ ಜುಲೈ 21 ರಂದು ಯುನೈಟೆಡ್ ಅರ್ಬನ್ ಎಮಿರೇಟ್ಸ್‌ನಿಂದ ಕೇರಳಕ್ಕೆ ಆಗಮಿಸಿದ್ದರು. ಈ ಬಗ್ಗೆ ವಿದೇಶದಲ್ಲೇ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪಾಸಿಟಿವ್ ಎಂಬುದು ಗೊತ್ತಾಗಿತ್ತು. ಯುವಕ ವಿಷಯ ಮರೆಮಾಚಿ ಕೇರಳಕ್ಕೆ ಬಂದಿದ್ದರು. ಈ ಬಗ್ಗೆ ಆರೋಗ್ಯ ಇಲಾಖೆ ಬಳಿ ಮಾಹಿತಿ ಇದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಸಾವಿನ ಹಿನ್ನೆಲೆ ಕೇರಳ ಸರ್ಕಾರ ಮತ್ತಷ್ಟು ಅಲರ್ಟ್ ಆಗಿದೆ. ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಜೊತೆಗಿನ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಆತ ಸಂಚರಿಸಿದ ಮಾರ್ಗದ ಕುರಿತು ನಕ್ಷೆ ಸಿದ್ಧಪಡಿಸಲಾಗುತ್ತಿದೆಯಂತೆ.
 
ಕೇರಳದ ಸೋಂಕಿತ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ. ಆದ್ರೆ ಇವರ ಸಾವು ಮಂಕಿಪಾಕ್ಸ್​​ನಿಂದಲೇ ಆಗಿದೆ ಎಂಬುದರ ಕುರಿತು ಇಂದು ಸ್ಪಷ್ಟ ಮಾಹಿತಿ ಹೊರಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ