ವಾಷಿಂಗ್ಟನ್ : ತಿಂಗಳ ಹಿಂದಷ್ಟೇ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿದ ಎಲೋನ್ ಮಸ್ಕ್ ಅದರ ಉದ್ಯೋಗಿಗಳನ್ನು ಕಂಪನಿಯಲ್ಲಿ ಕಠಿಣವಾಗಿ ದುಡಿಸಿಕೊಳ್ಳುತ್ತಿದ್ದಾರೆ.
ವಾರಕ್ಕೆ 80 ಗಂಟೆ ಕೆಲಸ ಮಾಡಿ, ಇಲ್ಲವೇ ಕಂಪನಿಯನ್ನು ತೊರೆಯಿರಿ ಎಂದು ಮಸ್ಕ್ ಕಟ್ಟುನಿಟ್ಟಾಗಿ ಹೇಳಿದ ಬಳಿಕ ನೂರಾರು ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೀಗ ಮಸ್ಕ್ನ ಉದ್ಯೋಗಿಗಳು ಕಂಪನಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ಹಾರ್ಡ್ಕೋರ್ ನೀತಿಗೆ ಬದ್ಧರಾಗಬೇಕಿರುವುದು ಅಗತ್ಯವಾಗಿದೆ. ಇದರಿಂದ ಹಲವು ಉದ್ಯೋಗಿಗಳು ತಮ್ಮ ಕಚೇರಿಯಲ್ಲೇ ಉಳಿದುಕೊಳ್ಳುವಂತಹ ಸನ್ನಿವೇಶಗಳೂ ನಿರ್ಮಾಣವಾಗಿದೆ.
ಈ ಹಿನ್ನೆಲೆ ಮಸ್ಕ್ ಉದ್ಯೋಗಿಗಳಿಗಾಗಿ ಕೆಲ ಕಚೇರಿಗಳಲ್ಲೇ ಮಲಗುವ ಕೋಣೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.