ನೂರಾರು ಟ್ವಿಟ್ಟರ್ ಉದ್ಯೋಗಿಗಳು ರಾಜೀನಾಮೆ

ಶನಿವಾರ, 19 ನವೆಂಬರ್ 2022 (11:24 IST)
ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅದರ ಅನಗತ್ಯ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿದರು.

ಶೇ.50ರಷ್ಟು ಉದ್ಯೋಗಿಗಳು ಕಡಿತವಾದ ಬಳಿಕವೂ ಉಳಿದುಕೊಂಡ ಉದ್ಯೋಗಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದರು. ಇಷ್ಟು ಮಾತ್ರವಲ್ಲದೇ ಟಫ್ ರೂಲ್ಸ್ಗಳಿಗೆ ಒಗ್ಗಿಕೊಂಡು ಹೋಗಿ ಇಲ್ಲವೇ ಕಂಪನಿ ತೊರೆಯಿರಿ ಎಂದು ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಿದ್ದಾರೆ.

ಇದೀಗ ಮಸ್ಕ್ ಉದ್ಯೋಗಿಗಳಿಗೆ ಕಂಪನಿ ತೊರೆಯಲು ನೀಡಿದ ಗಡುವಿಗೂ ಮೊದಲೇ ನೂರಾರು ಉದ್ಯೋಗಿಗಳು ತಾವಾಗಿಯೇ ರಾಜೀನಾಮೆ ನೀಡಿದ್ದಾರೆ.

ವರದಿಗಳ ಪ್ರಕಾರ, ಎಲೋನ್ ಮಸ್ಕ್ ಹಾರ್ಡ್ಕೋರ್ ಟ್ವಿಟ್ಟರ್ 2.0 ಎಂದು ವಜಾ ಪ್ರಕ್ರಿಯೆಯನ್ನು ಘೋಷಿಸಿದ್ದಾರೆ. ಇದಾದ ಬಳಿಕ ನೂರಾರು ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ