ದೆಹಲಿ : ಭಾರತ ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿದೆ. ಕರ್ನಾಟಕದ 4 ನಗರ ಪಾಲಿಕೆಗಳಿಗೆ ಸ್ವಚ್ಛ ನಗರ ಪುರಸ್ಕಾರ ಲಭಿಸಿದೆ.
ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಸ್ವಚ್ಛನಗರ ಪುರಸ್ಕಾರ ದೊರಕಿದೆ. ಸಚಿವ ಭೈರತಿ ಬಸವರಾಜ್ ಸ್ವಚ್ಛ ನಗರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರದಿಂದ ನೀಡುವ ಸ್ವಚ್ಛನಗರ ಪುರಸ್ಕಾರವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವೀಕಾರ ಮಾಡಿದ್ದಾರೆ. ಕಳೆದ ವರ್ಷ ಘೋಷಣೆಯಗಿದ್ದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿತ್ತು.
ಕೇಂದ್ರದ ಸ್ವಚ್ಛ, ಕಸ ಮುಕ್ತ ಪ್ರಶಸ್ತಿಗೆ ಬೆಂಗಳೂರು ಕೂಡ ಆಯ್ಕೆ ಆಗಿದೆ. ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ ಮತ್ತು ಕಸ ಮುಕ್ತ ನಗರಗಳ ಅಡಿಯಲ್ಲಿ ಅರ್ಜಿಗಳನ್ನು ಈ ಹಿಂದೆ ಆಹ್ವಾನಿಸಿತ್ತು. ಆ ಪ್ರಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಸರ್ವೇಕ್ಷಣಾ 2021 ಪ್ರಶಸ್ತಿ ನೀಡುತ್ತಿದ್ದು, ಇದರಲ್ಲಿ ಬೆಂಗಳೂರು ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ರಾಜ್ಯದ ಒಟ್ಟು 9 ನಗರಗಳು ಸ್ವಚ್ಛ ನಗರಗಳೆಂದು ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಕೆಲ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣಾ 2021 ಪ್ರಶಸ್ತಿ ಪಡೆಯಲಿದ್ದಾರೆ.