ಲಾಭದ ಹಳಿ ಏರಿದ `ನಮ್ಮ ಮೆಟ್ರೋ’

ಶನಿವಾರ, 8 ಅಕ್ಟೋಬರ್ 2022 (08:42 IST)
ಬೆಂಗಳೂರು : ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ನಷ್ಟದ ಮೇಲೆ ನಷ್ಟವಾಗುತ್ತ ಸಾಗುತ್ತಿದೆ.

ಏರ್ ಇಂಡಿಯಾದಿಂದ ಹಿಡಿದು ಬಿಎಂಟಿಸಿವರೆಗೂ ಇದೇ ಕತೆ. ಆದ್ರೆ ನಮ್ಮ ಬಿಎಂಟಿಸಿ ಬಹುತೇಕ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪುತ್ತಿದೆ. ಕೆಎಸ್ಆರ್ಟಿಸಿ ಆರ್ಥಿಕ ಸ್ಥಿತಿಯೂ ಹೆಚ್ಚೇನು ಸದೃಢವಾಗಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಮಾತ್ರ ಲಾಭದ ಟ್ರ್ಯಾಕ್ನಲ್ಲಿ ಓಡ್ತಿದೆ. ಬಿಎಂಆರ್ಸಿಎಲ್ ಕೋವಿಡ್ ಬಳಿಕ ಕಂಪ್ಲೀಟ್ ಲಾಭಕ್ಕೆ ತಿರುಗಿದ್ದು, ನಿತ್ಯ 1 ಕೋಟಿ 20 ಲಕ್ಷ ರೂ.ಗೂ ಹೆಚ್ಚಿನ ಗಳಿಕೆ ಮಾಡುತ್ತಿದೆ. ಇದರಲ್ಲಿ 1 ಕೋಟಿಯಷ್ಟು ನಿರ್ವಹಣಾ ವೆಚ್ಚ ಆಗ್ತಿದ್ರೆ ಉಳಿದ 20 ಲಕ್ಷ ರೂ. ಉಳಿತಾಯ ಖಾತೆ ಸೇರುತ್ತಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ