ಮೆಟ್ರೋ ಕಾಮಗಾರಿಯಿಂದಲೇ ಮುಳುಗಿತಾ ಬೆಂಗಳೂರು..?

ಗುರುವಾರ, 8 ಸೆಪ್ಟಂಬರ್ 2022 (11:23 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಪ್ರವಾಹಕ್ಕೆ ಕಾರಣ ಬರೀ ಒತ್ತುವರಿ ಅಂದುಕೊಂಡಿದ್ವಿ. ಆದರೆ ಬೆಂಗಳೂರು ಪ್ರವಾಹಕ್ಕೆ ಮೆಟ್ರೋ ಕಾಮಗಾರಿ ಕೂಡ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ವರುಣನ ರಣಾರ್ಭಟ ಹೆಚ್ಚಾಗಿದೆ. ಮಳೆರಾಯನ ಆರ್ಭಟಕ್ಕೆ ಇಡೀ ಬೆಂಗಳೂರು ಮುಳುಗಡೆ ಆಗಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಈ ಪ್ರವಾಹ ಪರಿಸ್ಥಿತಿಗೆ ಕಾರಣ ಒಂದ್ಕಡೆ ರಾಜಕಾಲುವೆ ಒತ್ತುವರಿ ಮತ್ತು ಕೆರೆ ಒತ್ತುವರಿಯಾದರೆ, ಮತ್ತೊಂದು ಕಾರಣ ಬಿಎಂಆರ್ ಸಿಎಲ್. ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದ ರಸ್ತೆಗಳಲ್ಲಿ ನೀರು ನಿಂತು ಕೃತಕ ನದಿ ಸೃಷ್ಟಿಯಾಗ್ತಿದೆ. 

ನಗರದ ಮಾರತಹಳ್ಳಿ, ಸರ್ಜಾಪುರ, ಹೊಸೂರು ಕಡೆ ಮತ್ತು ಏರ್ ಪೋರ್ಟ್ ಕಡೆಗೆ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಅರೆಬರೆ ಕಾಮಗಾರಿಯಿಂದ ಗುಂಡಿ ಬಿದ್ದು ನೀರು ನಿಂತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ