ಸಂಸತ್ತಿನ ವಿಶ್ವಾಸ ಗೆದ್ದ ಪ್ರಧಾನಿ ಮೋದಿ
ನಿನ್ನೆ ತಡ ರಾತ್ರಿಯವರೆಗೂ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆ, ಮತ ಪ್ರಕ್ರಿಯೆಗಳು ನಡೆದವು. ಒಟ್ಟು 451 ಸದಸ್ಯರು ನಿನ್ನೆ ಸದನದಲ್ಲಿ ಹಾಜರಿದ್ದರು. ಈ ಪೈಕಿ 325 ಸದಸ್ಯರು ಸರ್ಕಾರದ ಪರ ಮತ ಹಾಕಿದರೆ ಅವಿಶ್ವಾಸದ ಪರ ಕೇವಲ 126 ಮತಗಳು ಬಂದವಷ್ಟೇ.
ತಟಸ್ಥವಾಗಿರುತ್ತೇವೆಂದಿದ್ದ ಎಐಡಿಎಂಕೆ ಕೂಡಾ ಸರ್ಕಾರದ ಪರವಾಗಿ ಮತ ಹಾಕಿತು. ಬಿಜೆಡಿ ಸಭಾತ್ಯಾಗ ಮಾಡಿದರೆ, ಶಿವಸೇನೆ ತಟಸ್ಥವಾಗಿ ಉಳಿಯಿತು. ಅಂತೂ ಕೇಂದ್ರಕ್ಕೆ ಈ ಗೆಲುವು ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ದೊಡ್ಡ ಬೂಸ್ಟ್ ಆಗಲಿದೆ.