ಪ್ರಧಾನಿಯನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಬಗ್ಗೆ ಟ್ವಿಟರಿಗರು ಏನಂತಾರೆ?
ಶುಕ್ರವಾರ, 20 ಜುಲೈ 2018 (16:05 IST)
ನವದೆಹಲಿ: ಸಂಸತ್ತು ಅಧಿವೇಶನದಲ್ಲಿ ನನ್ನನ್ನು ಎಷ್ಟೇ ಧ್ವೇಷಿಸಿದರೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎನ್ನುತ್ತಾ ತಮ್ಮ ಆಸನದಿಂದ ಎದ್ದು ಬಂದು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು ರಾಹುಲ್ ಗಾಂಧಿ ನಡೆ ಬಗ್ಗೆ ಟ್ವಿಟರ್ ನಲ್ಲಿ ಆಸಕ್ತಿಕರ ಚರ್ಚೆಗಳು ನಡೆಯುತ್ತಿವೆ.
ಕೆಲವರು ರಾಹುಲ್ ನಡೆಯನ್ನು ಅದ್ಭುತ ಎಂದು ಕೊಂಡಾಡಿದರೆ ಇನ್ನು ಕೆಲವರು ಟೀಕಿಸಿದ್ದಾರೆ. ಮತ್ತೆ ಕೆಲವರು ಎಂದಿನಂತೆ ರಾಹುಲ್ ರನ್ನು ಟ್ರೋಲ್ ಮಾಡಿದ್ದಾರೆ.
ಎಂತಹಾ ಕಮಾಲ್ ಮಾಡಿಬಿಟ್ಟಿರಿ ರಾಹುಲ್ ಜೀ. ಅಂತೂ ನಿಮ್ಮ ಆ ಒಂದು ಕಣ್ಸನ್ನೆಯೇ ಆಡಳಿತ ಪಕ್ಷವನ್ನು ನಡುಗಿಸಿತು ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಕಾಂಗ್ರೆಸ್ ಸಂಸದ ಶಶಿ ತರೂರ್ ಹೊಗಳಿದರೆ, ಇದೊಂದು ಗೆಲುವಿನ ಅಪ್ಪುಗೆಯಾಗಿತ್ತು ಎಂದು ಕೇಂದ್ರದ ಮಾಜಿ ಸಚಿವ ಅಜಯ್ ಮಾಕೆನ್ ಕೊಂಡಾಡಿದ್ದಾರೆ.
ಆದರೆ ಬಿಜೆಪಿ ನಾಯಕಿ ಕಿರಣ್ ಖೇರ್ ರಾಹುಲ್ ಗೆ ಈ ರೀತಿ ಮಾಡಲು ನಾಚಿಕೆಯಾಗಬೇಕು. ಯಾವುದೇ ಪುರಾವೆಯಿಲ್ಲದೇ ಸಚಿವರುಗಳ ವಿರುದ್ಧ ಆರೋಪ ಹೊರಿಸಿದರು. ಕೊನೆಗೆ ಮೋದಿ ಜೀಯನ್ನು ಅಪ್ಪಿಕೊಂಡು ಡ್ರಾಮಾ ಮಾಡಿದರು ಎಂದು ಟೀಕಿಸಿದ್ದಾರೆ.
ಮತ್ತೆ ಕೆಲವು ಟ್ವಿಟರಿಗರು ರಾಹುಲ್ ಮುಂದಿನ ಸ್ಟೆಪ್ ಬಾಲಿವುಡ್ ಕಡೆಗೆ ಎಂದು ಟ್ರೋಲ್ ಮಾಡಿದ್ದಾರೆ. ರಾಹುಲ್ ಭಾರತದ ಅತ್ಯುತ್ತಮ ಮನರಂಜಕರು ಎಂದು ಕೆಲವು ಟ್ವಿಟರಿಗರು ತಮಾಷೆ ಮಾಡಿದ್ದಾರೆ. ಅಂತೂ ಇಂದಿನ ಸಂಸತ್ತು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿಗಿಂತ ರಾಹುಲ್ ಅಪ್ಪುಗೆ ಬಗ್ಗೆಯೇ ಹೆಚ್ಚು ಸುದ್ದಿ ಓಡಾಡುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.