ನೆಟ್‌ಫ್ಲಿಕ್ಸ್ ದರ ಏರಿಕೆ! ಭಾರತದಲ್ಲಿ ಎಷ್ಟು?

ಶನಿವಾರ, 15 ಜನವರಿ 2022 (16:03 IST)
ವಾಷಿಂಗ್ಟನ್ : ಇತ್ತೀಚೆಗೆ ನೆಟ್ಫ್ಲಿಕ್ಸ್ ಭಾರತದಲ್ಲಿ ಸಬ್ಸ್ಕ್ರಿಪ್ಶನ್ ಯೋಜನೆಯ ದರವನ್ನು ಕಡಿಮೆ ಮಾಡಿತ್ತು.
 
ಆದರೆ ಇಂದು ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ಮಾಸಿಕ ಹಾಗೂ ವಾರ್ಷಿಕ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ನೆಟ್ಫ್ಲಿಕ್ಸ್ ಹೊಸ ಚಂದಾದಾರರನ್ನು ಆಕರ್ಷಿಸಲು ಯೋಜನೆಗಳ ಬೆಲೆಯನ್ನು ಕಡಿತಗೊಳಿಸಿತ್ತು.

ಮಾಸಿಕ ಯೋಜನೆಯ ದರ 149 ರೂ. ಯಿಂದ ಪ್ರಾರಂಭವಾಗುವಂತೆ ಮಾಡಿತ್ತು. ಆದರೆ ನೆಟ್ಫ್ಲಿಕ್ಸ್ ಅಮೇರಿಕಾ ಹಾಗೂ ಕೆನಡಾದಲ್ಲಿ ತನ್ನ ಮಾಸಿಕ ದರವನ್ನು 1 ಡಾಲರ್ನಿಂದ(74 ರೂ.) 2 ಡಾಲರ್(148 ರೂ.) ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. 

ಕೆನಡಾದಲ್ಲಿ ಸ್ಟ್ಯಾಂಡರ್ಡ್ ಪ್ಲ್ಯಾನ್ 14.99 ಕೆನಡಾ ಡಾಲರ್(888 ರೂ.)ನಿಂದ 16.49 ಡಾಲರ್(977 ರೂ.)ಗೆ ಹೆಚ್ಚಿಸಲಾಗಿದೆ. ಪ್ರೀಮಿಯಂ ಯೋಜನೆಯನ್ನು 20 ಡಾಲರ್(1185 ರೂ.)ನಿಂದ 20.99 ಡಾಲರ್(1244 ರೂ.)ಗೆ ಹೆಚ್ಚಿಸಲಾಗಿದೆ. ಆದರೆ ಪ್ರಾರಂಭಿಕ ಯೋಜನೆಯನ್ನು ಹೆಚ್ಚಿಸಿಲ್ಲ. ಬದಲಾಗಿ 9.99 ಕೆನಡಾ ಡಾಲರ್(592 ರೂ.)ನಲ್ಲಿಯೇ ಉಳಿದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ