ಕೋವಿಡ್ ಹೊಸ ತಳಿ : ರಾಜ್ಯಗಳಲ್ಲಿ ಹೈ ಅಲರ್ಟ್!

ಶನಿವಾರ, 24 ಡಿಸೆಂಬರ್ 2022 (14:48 IST)
ನವದೆಹಲಿ :  ಕೊರೊನಾ ವೈರಸ್ ಓಮಿಕ್ರಾನ್ನ ಉಪತಳಿ ಬಿಎಫ್.7 ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.

ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ.

ಭಾರತದಲ್ಲಿ ಈಗಾಗಲೇ ಎಲ್ಲ ರಾಜ್ಯಗಳೂ ಅಲರ್ಟ್ ಆಗಿದ್ದು, ಸಾರ್ವಜನಿಕರು ಜಾಗೃತವಾಗಿರುವಂತೆ ಸೂಚಿಸಿವೆ. ಜನರು ಗುಂಪಿನಲ್ಲಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಅಲ್ಲದೇ ಉಪತಳಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್ಗೆ ಮಾದರಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೇಳಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 129 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ