ಹೆಚ್ಚುತ್ತಿರುವ ನಿಫಾ ವೈರಸ್ : ಶಾಲಾ ಕಾಲೇಜುಗಳಿಗೆ ರಜೆ

ಶನಿವಾರ, 16 ಸೆಪ್ಟಂಬರ್ 2023 (10:58 IST)
ಕೋಯಿಕ್ಕೋಡ್ : ಕೇರಳದಲ್ಲಿ ನಿಫಾ ವೈರಸ್  ಹೆಚ್ಚಾಗುತ್ತಿದೆ. ಶುಕ್ರವಾರ ಕೋಯಿಕ್ಕೋಡ್ನಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಘೋಷಣೆ ಮಾಡಲಾಗಿತ್ತು. ಸದ್ಯ ಈ ರಜೆಯನ್ನು ಸೆ.24ರ ವರೆಗೆ ವಿಸ್ತರಿಸಲಾಗಿದೆ.
 
ಎಲ್ಲಾ ಶಾಲೆಗಳಿಗೆ ಸೆ.14 ಮತ್ತು 15 ರಂದು ರಜೆ ನೀಡುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಅಲ್ಲದೆ, ಈ ಆದೇಶ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿತ್ತು. ಬಳಿಕ ಒಂದು ದಿನ ರಜೆಯನ್ನು ವಿಸ್ತರಿಸಲಾಗಿತ್ತು. ಇದೀಗ ಮುಂಜಾಗ್ರತಾ ಕ್ರಮವಾಗಿ ಸೆ.24 ರವರೆಗೆ ರಜೆ ವಿಸ್ತರಿಸಲಾಗಿದೆ.

ಶಾಲೆಗಳನ್ನು ಮುಚ್ಚುವುದು ಎಲ್ಲಾ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಅನ್ವಯಿಸುತ್ತದೆ. ಸೆಪ್ಟೆಂಬರ್ 14 ಮತ್ತು 15 ರಂದು ಈ ಹಿಂದೆ ಘೋಷಿಸಲಾದ ಎರಡು ದಿನಗಳ ರಜೆಯ ಮುಂದುವರಿಕೆಯಲ್ಲಿ ಈ ನಿರ್ಧಾರವು ಪರಿಗಣನೆಗೆ ಬಂದಿದೆ.

ಕೋಯಿಕ್ಕೋಡ್ನಲ್ಲಿ ಮೊದಲ ನಿಫಾ ವೈರಸ್ ಪತ್ತೆಯಾದ ಹಿನ್ನೆಲೆ ವೈರಸ್ನ ಮೂಲವನ್ನು ಪತ್ತೆ ಹಚ್ಚಲು ಕೇಂದ್ರದ ತಜ್ಞರ ತಂಡವು ಶುಕ್ರವಾರ ಮಾರುತೋಣಕರ ಪಂಚಾಯತ್ ವ್ಯಾಪ್ತಿಯಲ್ಲಿರುವ ರೋಗಿಯ ಮನೆ ಭೇಟಿ ನೀಡಿದರು. ಇದೇ ವೇಳೆ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಅವರ ಕೃಷಿ ಭೂಮಿಯನ್ನು ಪರಿಶೀಲಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ