ಬೆಂಗಳೂರು : ರಾಜ್ಯದಲ್ಲಿ ಹತ್ತು ಹಲವು ಕಾರಣಗಳಿಂದ ಕೋವಿಡ್ ಸ್ಫೋಟ ಮುಂದುವರಿದಿದೆ.
ಜನವರಿ 31ರವರೆಗೂ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, 50:50 ರೂಲ್ಸ್ ಈಗಿರುವಂತೆಯೇ ಮುಂದುವರಿಯಲಿವೆ. ಆದರೆ ಜನವರಿ 14ರಂದು ಪ್ರಧಾನಿ ಮೋದಿ ಜೊತೆ ಮೀಟಿಂಗ್ ನಿಗದಿ ಆಗಿರುವ ಕಾರಣ ಇನ್ನಷ್ಟು ಟಫ್ ರೂಲ್ಸ್ ಜಾರಿ ಸಂಬಂಧ ಬೇರೆ ನಿರ್ಣಯಗಳನ್ನು ಬೊಮ್ಮಾಯಿ ಸಭೆ ತೆಗೆದುಕೊಂಡಿಲ್ಲ.
ಪ್ರಧಾನಿ ಸಭೆ ಬಳಿಕ ಇನ್ನಷ್ಟು ಟಫ್ ರೂಲ್ಸ್ ಜಾರಿ ಮಾಡುವ ಸುಳಿವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದಾರೆ. ಸದ್ಯಕ್ಕೆ ಬೂಸ್ಟರ್ ಡೋಸ್ ಹೆಚ್ಚಳ ಮಾಡುವಂತೆ.. ಮಕ್ಕಳ ಚಿಕಿತ್ಸೆಗೆ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಬೆಂಗಳೂರಿನ ಅತೀ ಹೆಚ್ಚು ಜನಸಂದಣಿಯ ಪ್ರಮುಖ ಮಾರುಕಟ್ಟೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವ, ಕೇಂದ್ರೀಕರಣ ಮಾಡುವ ಕಾರ್ಯ ಮಾಡುತ್ತೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.