ಬಸ್ಗಳಲ್ಲಿ ಮಹಿಳಾ ಸೀಟ್ ಗಳಲ್ಲಿ ಕೂತರೇ ದಂಡ!
2021ರಲ್ಲಿ ಮಹಿಳೆಯರ ಆಸನದಲ್ಲಿ ಕುಳಿತ ಪುರುಷರಿಗೆ ದಂಡ ಹಾಕಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸುಮಾರು 1,00,300 ರೂ. ಹಣ ಸಂಗ್ರಹಿಸಿದೆ.
ಜೊತೆಗೆ ಈ ವರ್ಷ 2,377 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ ಬಿಎಂಟಿಸಿ ತಪಾಸಣಾ ಸಿಬ್ಬಂದಿ 3,94,905 ರೂ. ಹಣ ಸಂಹಗ್ರಹಿಸಿದೆ. ಹಾಗೂ ಮಹಿಳೆಯರ ಆಸನಗಳನ್ನ ಆಕ್ರಮಿಸಿಕೊಂಡ 134 ಪುರುಷ ಪ್ರಯಾಣಿಕರಿಂದ ಒಟ್ಟು 13,400 ರೂ. ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.