ಇಂದಿನಿಂದ ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಇಲ್ಲ

ಭಾನುವಾರ, 1 ಜನವರಿ 2023 (08:03 IST)
ನವದೆಹಲಿ : ಮನೆ ಬಾಡಿಗೆ ಮೇಲೆ ಶೇ.18 ಸರಕು ಮತ್ತು ಸೇವಾ ತೆರಿಗೆ ವಿಧಿಸುತ್ತಿದ್ದ ನಿಯಮವನ್ನು ಇಂದಿನಿಂದ ಕೈಬಿಡಲಾಗಿದೆ.

ಬಾಡಿಗೆದಾರನಿಗೆ ಕೇವಲ ವಸತಿ ಉದ್ದೇಶಕ್ಕೆ ಮನೆ ನೀಡಿದ್ದರೆ ಅದಕ್ಕೆ ಮನೆ ಮಾಲೀಕ ಜಿಎಸ್ಟಿ ಕಟ್ಟಬೇಕಿಲ್ಲ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೇಳಿದೆ. ಆದರೆ ಬಾಡಿಗೆ ತೆಗೆದುಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಶೇ.18ರಷ್ಟು ಜಿಎಸ್ಟಿ ಪಾವತಿಸಬೇಕಾಗುತ್ತದೆ.

ಡಿಸೆಂಬರ್ 17 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯ ಶಿಫಾರಾಸುಗಳು ಜ.1 ರಿಂದ ಜಾರಿಗೆ ಬರುತ್ತಿದೆ. ರಿಫೈನರಿಗಳಲ್ಲಿ ಬಳಸಲಾಗುವ ಈಥೈಲ್ ಮದ್ಯ ಮೇಲೆ ಇಂದಿನಿಂದ ಶೇ.5 ಜಿಎಸ್ಟಿ ವಿಧಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ