ಒಟಿಟಿಯಲ್ಲಿ ಇನ್ನು ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ : ಆರೋಗ್ಯ ಸಚಿವಾಲಯ

ಗುರುವಾರ, 1 ಜೂನ್ 2023 (12:36 IST)
ನವದೆಹಲಿ : ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ತಂಬಾಕು ವಿರೋಧಿ ಎಚ್ಚರಿಕೆ ನೀಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಡ್ಡಾಯಗೊಳಿಸಿದೆ.
 
ಸಿನಿಮಾ ಥಿಯೇಟರ್ಗಳಲ್ಲಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆಯನ್ನು ಈ ಹಿಂದೆಯಿಂದಲೂ ಪ್ರದರ್ಶಿಸಲಾಗುತ್ತಿದೆ. ಆದರೆ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿರಲಿಲ್ಲ. ಇದೀಗ ಆರೋಗ್ಯ ಸಚಿವಾಲಯ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲೂ ಇದನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವನ್ನು ಪ್ಲಾಟ್ಫಾರ್ಮ್ಗಳು ಅನುಸರಿಸದೇ ಹೋದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸುವಾಗ ಒಟಿಟಿ ಪ್ಲಾಟ್ಫಾರ್ಮ್ಗಳು ತಂಬಾಕು ವಿರೋಧಿ ಆರೋಗ್ಯದ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು. ಅಲ್ಲದೇ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕನಿಷ್ಟ 20 ಸೆಕೆಂಡುಗಳ ವರೆಗೆ ಆಡಿಯೋ ಅಥವಾ ದೃಶ್ಯದ ರೂಪದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಇಲ್ಲವೇ ನಡುವೆ ಪ್ರದರ್ಶಿಸಬೇಕೆಂದು ಆರೋಗ್ಯ ಸಚಿವಾಲಯ ಹೇಳಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ