ಅಧಿವೇಶನದ ಮೇಲೆ ಒಮಿಕ್ರಾನ್ ಕರಿನೆರಳು!

ಶುಕ್ರವಾರ, 17 ಡಿಸೆಂಬರ್ 2021 (09:34 IST)
ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಶುರುವಾಗಿ, ಪ್ರತಿ ಪಕ್ಷ ಕಾಂಗ್ರೆಸ್ ಸೇರಿದಂತೆ ಸ್ಥಳೀಯ ರೈತರು ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
 
ಇದನ್ನು ಕಂಡು ರಾಜ್ಯದ ಜನ ಆತಂಕದಿಂದ ನೋಡುವಂತಾಗಿದೆ. ಪ್ರತಿಭಟನೆ ಮಾಡುವುದು ಅವರವರ ಹಕ್ಕಾದರೂ ರಾಜ್ಯದ ಜನತೆ ಭೀತಿಗೊಳಗಾಗಿರುವುದು ಕೊರೊನಾ ಸೋಂಕಿನ ಕರಾಳತೆಯ ಹಿನ್ನೆಲೆಯಲ್ಲಿ.

ಆ ಪಾಟಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ, ತಾವುಂಟು ಮೂರು ಲೋಕವುಂಟು ಎಂಬಂತೆ ಪ್ರತಿಭಟನಾಕಾರರು ಗುಂಪುಗುಂಪಾಗಿ ಪ್ರತಭಟನೆಯಲ್ಲಿ ತೊಡಗಿದ್ದಾರೆ. ಮಾಸ್ಕ್ ಅಂತೂ ಯಾರೊಬ್ಬರ ಮೂಗಿನ ಮೇಲೂ ಇಲ್ಲವಾಗಿದೆ. ಇಂತಹ ಆತಂಕದ ಪರಿಸ್ಥಿತಿಯಿರುವಾಗಲೇ… ಒಮಿಕ್ರಾನ್ ಎಂಬ ಕೊರೊನಾದ ಹೊಸ ತಳಿ ತನ್ನ ಆಟವನ್ನು ಬೆಳಗಾವಿಯಲ್ಲಿಯೂ ಶುರುವಿಟ್ಟುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ