ಒನ್ ನೇಷನ್, ಒನ್ ಎಲೆಕ್ಷನ್ : ಕಾಗೇರಿ

ಮಂಗಳವಾರ, 29 ಮಾರ್ಚ್ 2022 (08:59 IST)
ಬೆಂಗಳೂರು : ಒಂದು ರಾಷ್ಟ್ರ, ಒಂದು ಚುನಾವಣೆ ಕೂಗು ಮತ್ತೆ ಎದ್ದಿದೆ.

ವಿಧಾನಸಭೆಯಲ್ಲಿ ಇವತ್ತು ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಸ್ತಾವಿಕ ಭಾಷಣದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಪ ಮಾಡಿದ್ದಾರೆ.

ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದ ವಿಚಾರ ಪ್ರಸ್ತಾಪ ಮಾಡಿರುವ ಸ್ಪೀಕರ್, ಒಂದು ರಾಷ್ಟ್ರ ಒಂದು ಚುನಾವಣೆ ಮೂಲಕ ಚುನಾವಣಾ ಖರ್ಚು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ ನಾಳೆಯಿಂದ ಎರಡು ದಿನಗಳ ಕಾಲ ಚುನಾವಣೆ ವ್ಯವಸ್ಥೆಯ ಸುಧಾರಣೆ ಅಗತ್ಯತೆ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಡೆ ಬಗ್ಗೆ ಕುತೂಹಲ ಹೆಚ್ಚಿದೆ. 

ವಿಧಾನಸಭೆಯಲ್ಲಿ ಚುನಾವಣೆ ವ್ಯವಸ್ಥೆಯ ಸುಧಾರಣೆಯ ಅಗತ್ಯತೆ ಕುರಿತಂತೆ 24 ಪುಟಗಳ ಪ್ರಾಸ್ತಾವಿಕ ಭಾಷಣ ಮಾಡಿದ್ರು. ಚುನಾವಣೆಗಳು ಜನಾದೇಶವಾಗುವ ಬದಲು ಧನಾದೇಶ ವಾಗುತ್ತಿವೆ.
ಚುನಾವಣೆಗಳಲ್ಲಿ ಅಸಹ್ಯ ಪಡುವಷ್ಟು ಹಣ ಶಕ್ತಿಯ ಪಾತ್ರ ಇಡೀ ವ್ಯವಸ್ಥೆಗೆ ರೋಗ ತರುವಷ್ಟು ಇದೆ. ಅಪರಾಧಿಗಳ ಪಾತ್ರ, ಜಾತಿ-ಧರ್ಮ-ಅಂಗ ಮತ್ತೆಲ್ಲ ತರಹದ ಪ್ರಭಾವಗಳು ಚುನಾವಣೆಗಳನ್ನು ರೋಗಗ್ರಸ್ತವಾಗಿಸಿವೆ.

ಚುನಾವಣೆಯ ಸಂದರ್ಭದಲ್ಲಿ ಮತ ಗಿಟ್ಟಿಸಲು ಕೊಂಡೊಯ್ಯುತ್ತಿದ್ದ ನೂರಾರು ಕೋಟಿ ನಗದು ಹಣ, ಮದ್ಯ, ಆಹಾರ ಪದಾರ್ಥಗಳು, ಮಾದಕ ದ್ರವ್ಯಗಳು, ಮತದಾರರನ್ನು ಆಕರ್ಷಿಸಲು ನೀಡಲಾಗುತ್ತಿರುವ ಉಡುಗೊರೆ ಇತ್ಯಾದಿಗಳನ್ನು ಆಯೋಗದ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವುದನ್ನು ಕಾಣುತ್ತೇವೆ.
ಘಟನೆಗಳು ಹೊಸದಲ್ಲದಿದ್ದರೂ ನ್ಯಾಯಯುಕ್ತತೆಯ ಬಗ್ಗೆ ಆತಂಕವನ್ನು ಹೆಚ್ಚಿಸುತ್ತದೆ. ರಾಜಕೀಯದ ಅಧೋಗತಿಯೋ ಭಾರತದ ಚುನಾವಣಾ ವ್ಯವಸ್ಥೆಯ ರೋಗಗ್ರಸ್ಥ ಸ್ಥಿತಿಯೋ ತಿಳಿಯದು.
ನಮ್ಮ ಚುನಾವಣಾ ಪ್ರಕ್ರಿಯೆಯು ನ್ಯಾಯಯುತ ಮತ್ತು ನಿರ್ಭೀತವಾಗಿರುವ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಸದುದ್ದೇಶವಾಗಿದೆ.

ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಅನುಷ್ಠಾನದಲ್ಲಿ ಮತದಾರರು ಭಾಗಿಯಾಗಿ ಸಾಮಾಜಿಕ ಪರಿಶೋಧನೆಗೊಳಪಡಿಸುವುದು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಸಾಮಾಜಿಕ ಮತ್ತು ರಾಜಕೀಯ ನಿರ್ಬಂಧನೆಗಳನ್ನು ವಿಧಿಸುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ