ಈ ವರ್ಷದ ಚಾರ್ಧಾಮ್ ಯಾತ್ರೆಗೆ ತೆರೆ!

ಬುಧವಾರ, 3 ನವೆಂಬರ್ 2021 (16:32 IST)
ಹಿಮಾಲಯದ ತಪ್ಪಲಿನ ಪ್ರಮುಖ ನಾಲ್ಕು ತೀರ್ಥ ಕ್ಷೇತ್ರಗಳಾದ, 'ಚಾರ್ ಧಾಮ್' ಗಳೆಂದೇ ಜನಪ್ರಿಯವಾಗಿರುವ ಗಂಗೋತ್ರಿ, ಯಮುನೋತ್ರಿ, ಕೇದರ ನಾಥ ಮತ್ತು ಬದ್ರಿ ನಾಥ ದೇಗುಲಗಳಿಗೆ ವಾಡಿಕೆಯಂತೆ ಬಾಗಿಲು ಹಾಕಲಾಗುತ್ತಿದೆ.
ಚಳಿಗಾಲ ಆಗಮಿಸುತ್ತಿದ್ದಂತೆಯೇ ಹಿಮಾಲಯ ಹಿಮದ ಹೊದಿಕೆ ಹೊದ್ದುಕೊಳ್ಳುವುದರಿಂದ ಈ ಯಾತ್ರಾ ಕ್ಷೇತ್ರಗಳು ಕೂಡ ಹಿಮ ಮಯವಾಗಲಿವೆ. ಹೀಗಾಗಿ ದೇಗುಲದ ಬಾಗಿಲನ್ನು ಹಾಕಲಾಗುತ್ತದೆ. ಭಕ್ತರಿಗೂ ದೇಗುಲ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ.
ಇನ್ನು ಮುಂದಿನ ವರ್ಷ ಮೇ ಬಳಿಕ ಒಂದೊಂದಾಗಿ ದೇಗುಲಗಳ ಬಾಗಿಲು ತೆರೆಯಲಾಗುತ್ತದೆ. ಬಾಗಿಲು ಹಾಕುವ ಮತ್ತು ತೆರೆಯುವ ಸಂದರ್ಭದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.
ಗಂಗೋತ್ರಿ ದೇಗುಲಕ್ಕೆ ದೀಪಾವಳಿಯ ಮಾರನೆಯ ದಿನ (ನವೆಂಬರ್ 5) ಗೋವರ್ಧನ ಪೂಜೆಯ ಬಳಿಕ ಬಾಗಿಲು ಹಾಕಲಾಗಿದೆ. ಯಮುನೋತ್ರಿ ಮತ್ತು ಕೇದರನಾಥ ದೇಗುಲಗಳಿಗೆ ನವೆಂಬರ್ 6 ರಂದು ಬಾಗಿಲು ಹಾಕಲಾಗುತ್ತದೆ. ಬದ್ರಿ ನಾಥ ದೇಗುಲಕ್ಕೆ ನವೆಂಬರ್ 20 ರಂದು ಬಾಗಿಲು ಹಾಕಲಾಗುತ್ತದೆ. ಈ ಮೂಲಕ ಈ ಋುತುವಿನ 'ಚಾರ್ ಧಾಮ್' ಯಾತ್ರೆಯು ಕೊನೆಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ