ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ : ಶ್ರೀಗಳು ಭವಿಷ್ಯ

ಶುಕ್ರವಾರ, 7 ಅಕ್ಟೋಬರ್ 2022 (12:57 IST)
ಧಾರವಾಡ : ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ. ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ.

ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠ  ದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು.

ಅದು ಸಂರಕ್ಷಣೆಯಾಗುತ್ತದೆ. ಪ್ರಾರಂಭದಲ್ಲೇ ನಾನು ಮಳೆ, ಗಾಳಿ, ಗುಡುಗು ಇದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು-ನೋವುಗಳಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ