ಆಧಾರ್ಗೆ ಲಿಂಕ್ ಮಾಡದೇ ಹೋದರೆ ಪ್ಯಾನ್ ಬ್ಯಾನ್!

ಸೋಮವಾರ, 26 ಡಿಸೆಂಬರ್ 2022 (13:37 IST)
ನವದೆಹಲಿ : ನಿಮ್ಮ ವೈಯಕ್ತಿಕ ಖಾತೆ ಸಂಖ್ಯೆಯನ್ನು ಆಧಾರ್ನೊಂದಿಗೆ ಇಲ್ಲಿಯವರೆಗೆ ಲಿಂಕ್ ಮಾಡಿಸದೇ ಹೋಗಿದ್ದಲ್ಲಿ, ಈ ಕೂಡಲೇ ಮಾಡಿಸಿಕೊಳ್ಳಿ.

ಏಕೆಂದರೆ, ನೀವು ಲಿಂಕ್ ಮಾಡಿಸದೇ ಹೋದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

2023ರ ಮಾರ್ಚ್ 31 ರ ಒಳಗಾಗಿ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲವೆಂದರೆ ಅದು ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ ಎಂದು ತಿಳಿಸಿದೆ. ಈ ಕ್ರಮದಿಂದ ನಿಮ್ಮ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವೂ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.

ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿದವರು 2023ರ ಮಾರ್ಚ್ 31ರ ಒಳಗಡೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಲಿಂಕ್ ಮಾಡದೇ ಹೋದ ಪಾನ್ಗಳು ಮುಂದಿನ ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ. ಇದು ಕಡ್ಡಾಯ ಹಾಗೂ ಅವಶ್ಯಕವಾಗಿದ್ದು, ಲಿಂಕ್ ಮಾಡಲು ತಡ ಮಾಡಬೇಡಿ ಎಂದು ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ