ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

ಭಾನುವಾರ, 18 ಡಿಸೆಂಬರ್ 2022 (12:23 IST)
ಬೆಂಗಳೂರು : ನ್ಯೂ ಇಯರ್ ಸೆಲೆಬ್ರೇಶನ್ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಪಬ್ಗಳು ಸಹ ತಯಾರಿ ನಡೆಸಿದೆ. ಈ ಮಧ್ಯೆ 18 ವರ್ಷ ತುಂಬದ ಅಪ್ರಾಪ್ತರು ಪಾರ್ಟಿ ಎಂಜಾಯ್ ಮಾಡಲು ಕಳ್ಳದಾರಿ ಹಿಡಿದಿದ್ದು,

ಕಲರ್ ಝೆರಾಕ್ಸ್ನ ಫೇಕ್ ಆಧಾರ್ ಕಾರ್ಡ್ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಶನ್ ಎಂದ್ರೆ ಎಣ್ಣೆ, ಎಣ್ಣೆ ಜೊತೆಗೆ ಡಿಜೆ ಬೇಕೇ ಬೇಕು.

ಇದಕ್ಕಂತಲೇ ಸಿಲಿಕಾನ್ ಸಿಟಿಯ ಪಬ್ಗಳು ಈ ವರ್ಷ ಹೊಸ ಹೊಸ ಡಿಜೆ ಪಾರ್ಟಿಗಳನ್ನು ಆಯೋಜನೆ ಮಾಡಿದೆ. ಆದರೆ ಕಳೆದೆರಡು ವರ್ಷದಿಂದ ನ್ಯೂ ಇಯರ್ ಸೆಲೆಬ್ರೇಶನ್ ಮಾಡದ ಕಾರಣ ಈ ವರ್ಷ ನ್ಯೂ ಇಯರ್ಗೆ ಯಾವುದೇ ಅಡೆ ತಡೆಗಳು ಇಲ್ಲ.

ಹೀಗಾಗಿ ಎಲ್ಲರೂ ಪಾರ್ಟಿ ಮೂಡ್ನಲ್ಲಿದ್ದಾರೆ. ಹೀಗೆ ಪಾರ್ಟಿ ಮೂಡ್ನಲ್ಲಿ ಇರೋರ ಪೈಕಿ 20 ವರ್ಷದೊಳಗಿನವರು ಕೂಡಾ ಇದ್ದಾರೆ. ಸರ್ಕಾರದ ರೂಲ್ಸ್ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ಪಬ್ ಹಾಗೂ ಬಾರ್ನೊಳಗೆ ಪ್ರವೇಶ ಇಲ್ಲ. ಒಂದೊಮ್ಮೆ ಪ್ರವೇಶ ನೀಡಿದರೆ ಪಬ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ