ಮಳೆ ನಿಂತು ಹೋದ ಮೇಲೆ... ಕೊಡಗಿನ ಜನರಿಗೆ ಈಗ ಭವಿಷ್ಯದ ಪ್ರಶ್ನೆ

ಬುಧವಾರ, 22 ಆಗಸ್ಟ್ 2018 (09:02 IST)
ಕೊಡಗು: ಮಳೆ ಬಂತು.. ನೆರೆಯೂ ಬಂತು.. ಮನೆ ಮಠ, ಆಸ್ತಿ, ಜಮೀನು ಎಲ್ಲವೂ ಕೊಚ್ಚಿ ಹೋಯಿತು. ಇದೀಗ ಕೊಡಗಿನ ಜನರಿಗೆ ಜೀವನ ಮುಂದೆ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಪ್ರವಾಹ ಬಂದು ನಿರಾಶ್ರಿತರ ಶಿಬಿರದಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಸದ್ಯಕ್ಕೆ ಹೊಟ್ಟೆ ತುಂಬಿಸಿಕೊಳ್ಳಲು ದಾನಿಗಳು ಸಹಾಯ ಮಾಡುತ್ತಿದ್ದಾರೆ. ಆದರೆ ಅವರ ದೊಡ್ಡ ಅಗತ್ಯ ಭವಿಷ್ಯದಲ್ಲಿ ಜೀವನ ಶೂನ್ಯದಿಂದ ಕಟ್ಟಿಕೊಳ್ಳಲು ಸಹಾಯ ಬೇಕಾಗಿದೆ.

ಮನೆ ಪತ್ರ, ಪಡಿತರ ಚೀಟಿ ಸೇರಿದಂತೆ ಇತರ ಸರ್ಕಾರಿ ದಾಖಲೆ ಪತ್ರಗಳು, ಮನೆ, ಜಮೀನು ಎಲ್ಲವೂ ಮರಳಿ ಪಡೆಯಬೇಕಾಗಿದೆ. ಇದಕ್ಕಾಗಿಯೇ ಸರ್ಕಾರ ಇದೀಗ ಸಂತ್ರಸ್ತರಿಗಾಗಿ ಶೀಘ್ರವೇ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರ ಜತೆಗೇ ನಿರಾಶ್ರಿತರಿಗೆ ಮನೆ ಕಟ್ಟಿಕೊಡಲು ಯೋಜನೆ ರೂಪಿಸಿದೆ.

ಇದಕ್ಕೆಲ್ಲಾ ಕನಿಷ್ಠವೆಂದರೂ ತಿಂಗಳುಗಳೇ ಬೇಕು. ಇದರ ನಡುವೆ ತಮ್ಮ ಬದುಕು ಸವೆಸುವುದು  ಹೇಗೆ ಎಂಬ ಚಿಂತೆ ಕೊಡಗಿನ ಜನತೆಯನ್ನು ಕಾಡುತ್ತಿದೆ. ಎಲ್ಲವನ್ನೂ ಶುರುವಿನಿಂದಲೇ ಕಟ್ಟಿಕೊಳ್ಳಬೇಕಲ್ಲಾ ಎಂಬ ಚಿಂತೆಯಲ್ಲಿ ಕೊಡಗಿನ ಜನ ಕಣ್ಣೀರಿಡುತ್ತಿದ್ದಾರೆ. ರಸ್ತೆ ರಿಪೇರಿ, ಮನೆ ಶುಚಿ ಕಾರ್ಯ ಇಂತಹ ಕೆಲಸಗಳಿಗೆ ಸರ್ಕಾರ ಈಗಾಗಲೇ ತನ್ನ ಕಾರ್ಯ ಶುರು ಮಾಡಿದೆ. ಹಾಗಿದ್ದರೂ ಇದೆಲ್ಲಾ ಸುಲಭದ ಮಾತಲ್ಲ. ಭವಿಷ್ಯದ ಚಿಂತೆಯಲ್ಲಿ ಕೊಡಗಿನ ಜನ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ