ಕೇರಳ ಹಿಂದೆಂದೂ ಕಾಣದ ಪ್ರವಾಹಕ್ಕೆ ತುತ್ತಾಗಲು ನಿಜ ಕಾರಣವೇನು ಗೊತ್ತಾ?
ಕೇರಳದ ಸುಮಾರು 35 ಕ್ಕೂ ಹೆಚ್ಚು ಡ್ಯಾಂಗಳು ಈ ವರ್ಷ ಉತ್ತಮ ಮಳೆಯಿಂದಾಗಿ ಶೇ. 85 ಕ್ಕಿಂತ ಹೆಚ್ಚು ಭರ್ತಿಯಾಗಿದ್ದವು. ಸಾಮಾನ್ಯವಾಗಿ ಜುಲೈ ತಿಂಗಳೊಳಗಾಗಿ ಡ್ಯಾಂಗಳು ಭರ್ತಿಯಾಗಿದ್ದರೆ ಜುಲೈ ಅಂತ್ಯಕ್ಕೆ ಮೊದಲೇ ನೀರು ಹೊರಬಿಡಬೇಕು.
ಆದರೆ ಕೇರಳದಲ್ಲಿ ಈ ಬಾರಿ ಡ್ಯಾಂಗಳು ಭರ್ತಿಯಾಗಿದ್ದರೂ ನೀರು ಹೊರಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಮತ್ತೆ ಆಗಸ್ಟ್ ತಿಂಗಳಲ್ಲೂ ಮಳೆ ಮುಂದುವರಿದಾಗ ಪ್ರವಾಹ ಏರ್ಪಟ್ಟಿತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಕಾರಣಕ್ಕೆ ಹಿಂದೆಂದೂ ಕಾಣದ ನೆರೆ ಸಂಕಷ್ಟಕ್ಕೆ ಕೇರಳದ ಜನ ಒಳಗಾದರು ಎನ್ನಲಾಗಿದೆ.