ವ್ಯಾಪಾರ ಸ್ಥಗಿತಗೊಳಿಸಿದ ಪೆಪ್ಸಿ ಕಂಪನಿಗಳು!

ಬುಧವಾರ, 9 ಮಾರ್ಚ್ 2022 (11:35 IST)
ಮಾಸ್ಕೋ : ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಬಂಧಗಳು ಮತ್ತಷ್ಟು ಹೆಚ್ಚಾಗುತ್ತಿದೆ.

ಇದೀಗ ಅಮೆರಿಕ ಮೂಲದ ಮೆಕ್ಡೋನಾಲ್ಡ್, ಸ್ಟಾರ್ಬಕ್ಸ್, ಪೆಪ್ಸಿ ಸೇರಿದಂತೆ ಕೆಲ ಕಂಪನಿಗಳ ಆಹಾರ ಉತ್ಪನ್ನಗಳ ಅಂಗಡಿಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿದೆ.

ರಷ್ಯಾ-ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿ ಈಗಾಗಲೇ ಸಾವಿರಾರೂ ಸಂಖ್ಯೆಗಳಲ್ಲಿ ಜನರ ಸಾವು-ನೋವಿಗೆ ಕಾರಣವಾಗಿದೆ. ಇದರಿಂದ ವಿಶ್ವದ ಕೆಲ ರಾಷ್ಟ್ರಗಳ ಪ್ರತಿಷ್ಠಿತ ಕಂಪನಿಗಳು ರಷ್ಯಾ ಮಾರುಕಟ್ಟೆಗೆ ನಿರ್ಬಂಧ ವಿಧಿಸಲು ಮುಂದಾಗಿದೆ.

ಇದೀಗ ಅಮೆರಿಕಾ ಮೂಲದ ಆಹಾರ ಉತ್ಪನ್ನಗಳಾದ ಮೆಕ್ಡೋನಾಲ್ಡ್, ಸ್ಟಾರ್ಬಕ್ಸ್, ಪೆಪ್ಸಿ, ಕೋಕಾ ಕೋಲಾ ರಷ್ಯಾದಲ್ಲಿರುವ ತನ್ನ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಿದೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಕ್ಡೋನಾಲ್ಡ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್ಜಿನ್ಸ್ಕಿ, ಉಕ್ರೇನ್ನಲ್ಲಿ ಅನಾವಶ್ಯಕವಾದ ದಾಳಿಯಿಂದಾದ ಸಾವು ನೋವುಗಳನ್ನು ಸಹಿಸುವುದಿಲ್ಲ. ಹಾಗಾಗಿ ನಮ್ಮ ಶಾಪ್ಗಳನ್ನು ಸದ್ಯದ ಮಟ್ಟಿಗೆ ಮುಚ್ಚುತ್ತಿರುವುದಾಗಿ ಉದ್ಯೋಗಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. 

ಮೆಕ್ಡೋನಾಲ್ಡ್ನ 800 ಶಾಪ್ಗಳನ್ನು ರಷ್ಯಾದಲ್ಲಿ ಮುಚ್ಚಲು ತೀರ್ಮಾನಿಸಿದೆ. ಆದರೆ ಅಲ್ಲಿ ಉದ್ಯೋಗ ಮಾಡುತ್ತಿದ್ದ 62 ಸಾವಿರ ಉದ್ಯೋಗಿಗಳಿಗೆ ವೇತನವನ್ನು ಈ ಹಿಂದಿನಂತೆ ಮುಂದುವರಿಸಲು ನಿರ್ಧರಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ