ಉಕ್ರೇನ್ ಮೇಲೆ ರಷ್ಯಾ ಆತಂಕ ಏನು?

ಬುಧವಾರ, 9 ಮಾರ್ಚ್ 2022 (08:18 IST)
ನ್ಯಾಟೋ ಸಂಕ್ಷಿಪ್ತ ರೂಪ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ).
 
ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ. ಉಕ್ರೇನ್ ನ್ಯಾಟೋದ ಭಾಗವಾಗಲು ಬಯಸುತ್ತಿತ್ತು. ಆದರೆ ರಷ್ಯಾ ನ್ಯಾಟೋವನ್ನು ಬಲವಾಗಿ ವಿರೋಧಿಸುತ್ತಿದೆ.

ತನ್ನ ವಿರುದ್ಧ ಹಣಿಯಲಾದ ದೇಶಗಳ ಒಕ್ಕೂಟ ಎಂದೇ ರಷ್ಯಾ ನ್ಯಾಟೋವನ್ನು ಕರೆಯುತ್ತಿದೆ. ಉಕ್ರೇನ್ ನ್ಯಾಟೋಗೆ ಸೇರಿದರೆ ಉಕ್ರೇನ್ ಮೂಲಕ ನ್ಯಾಟೋದ ಸೈನ್ಯ ತನ್ನ ಗಡಿಗೆ ಬರುತ್ತದೆ ಎಂಬ ಆತಂಕವನ್ನು ರಷ್ಯಾ ವ್ಯಕ್ತಪಡಿಸಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿತ್ತು.

ನ್ಯಾಟೋ ರಚನೆಯಾದ ಆರಂಭದಲ್ಲಿ 12 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು. ಇದು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ಐಸ್ಲ್ಯಾಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ಅನ್ನು ಒಳಗೊಂಡಿತ್ತು. ಇಂದು, ನ್ಯಾಟೋ ಅಡಿಯಲ್ಲಿ 30 ಸದಸ್ಯ ರಾಷ್ಟ್ರಗಳಿವೆ

ನ್ಯಾಟೋ ಸಾಮಾನ್ಯ ಭದ್ರತಾ ನೀತಿಯ ಮೇಲೆ ಕಾರ್ಯನಿರ್ವಹಿಸುವ ಮಿಲಿಟರಿ ಮೈತ್ರಿಯಾಗಿದೆ. ನ್ಯಾಟೋ ಸದಸ್ಯ ರಾಷ್ಟ್ರವನ್ನು ಆಕ್ರಮಿಸಿದರೆ, ಇದನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗಟ್ಟಾಗಿ ಕೆಲಸ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ