ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಗುರುವಾರ, 3 ನವೆಂಬರ್ 2022 (07:04 IST)
ನವದೆಹಲಿ : ವಾಹನ ಸವಾರರಿಗೆ ಸಿಹಿಸುದ್ದಿ. ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ 40 ಪೈಸೆ ಇಳಿಕೆಯಾಗಿದೆ.

ಪರಿಷ್ಕೃತ ದರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ. ಕಳೆದ 6 ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿಯಲ್ಲಿತ್ತು. ಏಪ್ರಿಲ್ 7 ರಂದು ಕೊನೆಯ ಬಾರಿಗೆ ದರ ಕಡಿತಗೊಂಡಿತ್ತು.

ಬೆಂಗಳೂರಿನಲ್ಲಿ ದರ ಎಷ್ಟು?

ಈ ಮೊದಲು 1 ಲೀಟರ್ ಪೆಟ್ರೋಲ್ ದರ 101.94 ರೂ. ಪೈಸೆ ಇದ್ದರೆ ಡೀಸೆಲ್ ದರ 87.89 ರೂ. ಇತ್ತು. ಈಗ ಪೆಟ್ರೋಲ್ ದರ 101.54 ರೂ. ಡೀಸೆಲ್ ದರ 87.49 ರೂ.ಗೆ ಇಳಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ