ಒತ್ತುವರಿ ತೆರವಿಗೆ ವಿರೋಧ-ಪೆಟ್ರೋಲ್ ಕೈ ಯಲ್ಲಿ ಹಿಡಿದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಮಹಿಳೆ

ಬುಧವಾರ, 12 ಅಕ್ಟೋಬರ್ 2022 (14:26 IST)
ಇಂದೂ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಮುಂದುವರೆದಿದೆ.ಇನ್ನೂ ಕೆ.ಆರ್ ಪುರಂನಲ್ಲಿ ಜೆಸಿಬಿ ಘರ್ಜನೆ ಆರಂಭಗೊಳ್ಳುತ್ತಿದ್ದಂತೆ ಡೆಮಾಲಿಷ್ ಮಾಡಬಾರದು ಅಂತಾ ಪೆಟ್ರೋಲ್ ಕ್ಯಾರಿನ್ ಹಿಡಿದು ಮಹಿಳೆ ನಿಂತಿದ್ದಾಳೆ.ರಾಜಕಾಲುವೆ ಮೇಲೆ ನಿಂತು ಸಿಎಂ ಬರಲಿ ಅಂತಿರೋ ಮಹಿಳೆ.ಕೆ.ಆರ್ ಪುರಂನ ಗಾಯತ್ರಿ ಲೆಔಟ್ ನಲ್ಲಿ ಪಾಲಿಕೆ ಆಡಳಿತಕ್ಕೆ ಮುಂದಾಗಿದೆ.ಹೀಗಾಗಿ ನಾವು ಹುಟ್ಟಿಕೊಂಡಿದ್ದೇವೆ. , ನಾವು ಇಲ್ಲಿ ಮನೆ ತೆರವು ಮಾಡೋಕೆ ಬಿಡೋಲ್ಲ ಅಂತಾ ಮನೆ ಕೊಟ್ಟಿದ್ದಾರೆ.
 
ನಮ್ಮ ಮನೆ ಕೆಡುತ್ತಾರೆ ಅಂದ್ರೆ ನಮಗೆ ಪರಿಹಾರ ನೀಡಬೇಕು.ಬಿಬಿಎಂಪಿ ಕಣ್ಣಿಗೆ ಕಾಣೋದು ನಮ್ಮಂತವರ ಮನೆ ಮಾತ್ರಾನಾ? ಅಂತಾ ಮನೆಗೆ ಕಣ್ಣೀರು ಹಾಕಿದ್ದಾರೆ.ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆಯ ಮಾಲೀಕ ಸುನೀಲ ಸಿಂಗ್ ಹಾಗೂ ಸೋನಾ ಸಿಂಗ್ ದಂಪತಿಗಳು ಕಾಣಿಸಿಕೊಂಡಿದ್ದಾರೆ.
 
ರಾಜಕಾಲುವೆ ಮೇಲೆ ಮನೆ ನಿರ್ಮಾಣವಾಗಿದೆ ಅಂತ ಬಿಬಿಎಂಪಿ ಮಾರ್ಕ್ ಮಾಡಿದೆ.2 ಮೀಟರ್ ಆಗಿದ್ದು ಬಿಬಿಎಂಪಿ ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ಕಾಂಪೌಂಡ್, ಮನೆ ಸೇರಿ 2 ಮೀಟರ್ ತೆರವು ಮಾಡೋಕೆ ಅಧಿಕಾರಿಗಳು ಮುಂದಾಗಿದ್ದಾರೆ.ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆಗೆ ಹಠ ಹಿಡಿದಿದ್ದಾರೆ.ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಮಹಿಳೆ ನಾವು ಮನೆಯನ್ನ ಲೋನ್ ಅಲ್ಲಿ ಕಟ್ಟಿದ್ದೇವೆ.ನನ್ನ ಮನೆಯನ್ನು ಯಾವ ಕಾರಣಕ್ಕೂ ಒಡೆಯಕ್ಕೆ ಬಿಡಲ್ಲ .ಸಿಎಂ ಸ್ಥಳಕ್ಕೆ ಬರಬೇಕು, ಪೆಟ್ರೋಲ್ ಹಿಡಿದು ಡ್ರಾಮಾ ಮಾಡ್ತಿದ್ದಾಳೆ.40 ಲಕ್ಷ ಲೋನ್ ಇದೆ, 20 ವರ್ಷದಿಂದ ಇರೋ ರಾಜಕಾಲುವೆ ಈಗೆಲ್ಲಿಂದ ಬಂತು?ಪಾಕಿಸ್ತಾನದಿಂದ ಬಂದೀದ್ದಿವಾ ಅಂತ ಪ್ರಶ್ನೆ? ಕಂಪೌಂಡ್ ಒಡೆದು ಕೊಳ್ಳಿ, ಅದು ಬಿಟ್ಟು ಮನೆಗೆ ಯಾಕೆ ಡ್ಯಾಮೇಜ್ ಮಾಡ್ತೀರಾ ಅಂತ ಪ್ರಶ್ನೆ.2 ವರ್ಷ ಕೋವಿಡ್ ಅಂತ ಸತ್ವಿ, ಈಗ ನೋಡಿದ್ರೆ ಹೀಗೇ ಅಂತ ಜನ ಪ್ರಶ್ನೆ ಮೇಲೆ ಪ್ರಶ್ನೆಯನ್ನ ಅಧಿಕಾರಿಗಳಿಗೆ ಮಾಡ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ