ರಾಂಚಿ : ಜಾರ್ಖಂಡ್ನಲ್ಲಿ ಪೆಟ್ರೋಲ್ ದರ ದಾಖಲೆಯ ಲೀಟರ್ಗೆ 25 ರೂ. ಇಳಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಮಂತ್ ಸೋರೇನ್ ಘೋಷಣೆ ಮಾಡಿದ್ದಾರೆ.
ಜಾರ್ಖಂಡ್ನ ಕಾಂಗ್ರೆಸ್ ಮತ್ತು ಜೆಎಮ್ಎಮ್ ಮೈತ್ರಿ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ಪೆಟ್ರೋಲ್ ಬೆಲೆ ಜನವರಿ 26 ರಿಂದ 25 ರೂ. ಕಡಿತ ಗೊಳಿಸುವುದಾಗಿ ಹೇಮಂತ್ ಸೋರೇನ್ ತಿಳಿಸಿದ್ದು, ಆದರೆ ಈ ರಿಯಾಯಿತಿ ಕೇವಲ ದ್ವಿಚಕ್ರ ಚಾಹನಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬಡ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸರ್ಕಾರ ಪೆಟ್ರೋಲ್ ಬೆಲೆ ಇಳಿಕೆಗೆ ನಿರ್ಧಾರ ಮಾಡಿದ್ದು, ಪ್ರತಿ ಲೀಟರ್ಗೆ 25 ರೂ. ಇಳಿಕೆ ಮಾಡಲಾಗುತ್ತಿದೆ.
ಇದು ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದು, 26 ಜನವರಿ 2022 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಟ್ಟಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದಾರೆ.