ಪ್ರಧಾನಿಗಳೇ 2019 ರ ನಂತರ ನೀವು ನಿರುದ್ಯೋಗಗಳಾಗಲಿದ್ದೀರಿ, ಕರ್ನಾಟಕಕ್ಕೆ ಬನ್ನಿ ವಯಸ್ಕರ ಶಿಕ್ಷಣ ಪಡೆಯಿರಿ, ಈಗ ನಿಮಗೆ ಅಂಬೇಡ್ಕರ್ ಅವರು ನೆನಪಾಗುತ್ತಿದ್ದಾರೆ ನಿಮ್ಮದೇ ಪಕ್ಷದ 4 ಜನ ದಲಿತ ಸಂಸದರು ಕೆಲಸ ಮಾಡರಾಗುತ್ತಿಲ್ಲ ಎಂದು ಹಿರಿಯ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಉದ್ಯೋಗ ಕೊಡುತ್ತೇನೆ ಎಂದ ಪ್ರಧಾನಿ ಉತ್ತರ ಕೊಡಲಿ, ನಾನು ಎಲ್ಲರಿಗೂ ಪ್ರಶ್ನೆ ಕೇಳುತ್ತೇನೆ. ನಾನು ಕೆಲವರಿಗೆ ಕಾಮಿಡಿ ಪೀಸ್ ತರ ಕಂಡರೆ ಅದು ಅವರ ಅಭಿಪ್ರಾಯ ನನಗೆ ಪ್ರಧಾನಿಗಳು ಕಾಮಿಡಿ ಪೀಸ್ ಥರ ಕಾಣುತ್ತಾ ಕಪ್ಪು ಹಣ ತರ್ಲಿಲ್ಲ, ಎಟಿಎಂಗಳಲ್ಲಿ ಇದುವರೆಗೆ ಜನರಿಗೆ ಹಣ ಸಿಗ್ತಿಲ್ಲವೇಕೇ? ಉತ್ತರ ಕೊಡುವಿರಾ ಮೋದಿಯವರೇ ಎಂದು ವ್ಯಂಗ್ಯವಾಡಿದ್ದಾರೆ.
ಪಿಎಂ ಜನರ ಹಣದಲ್ಲಿ ಫಾರೀನ್ ಟೂರ್ ಹೋಗ್ತಾರೆ ಬಿಜೆಪಿಯವರು ನನ್ನ ಹೆಂಡ್ತಿ ಬಗ್ಗೆ, ನನ್ನ ಸತ್ತ ಮಗನ ಬಗ್ಗೆ, ನನ್ನ ಜಾತಿ ಬಗ್ಗೆ ಮಾತಾಡಿದ್ದಾರೆ
ಭಾರತವನ್ನು ಮತೀಯತೆಯಿಂದ ಕಾಪಾಡಬೇಕಿದೆ. ಕೋಮುವಾದದಿಂದ ಕಾಪಾಡಬೇಕಿದೆ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಬಿಜೆಪಿಯವರುಜಿಎಸ್ಟಿ ಯಿಂದ ದೇಶವನ್ನು ಕೊಳ್ಳೆ ಹೊಡೆದಿದ್ದಿರಿ. ಡಿಮಾನಿಟೈಜೇಷನ್ ಇಂದು ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ನಿಮ್ಮ ಜತೆ ಇದ್ದಾರೆನಿಮಗ್ಯಾವ ನೈತಿಕತೆ ಇದೆ ನನ್ನ ಪ್ರಶ್ನೆಗೆ ಉತ್ತರ ಕೋಡಿ, ಸಾಮಾಜಿಕ ಜಾಲತಣದಲ್ಲಿ ಪ್ರಶ್ನೆ ಕೇಳಿದರೆ ನಟ ನೇ ಅಲ್ಲ ಅಂತೀರಾ?