ಮಕ್ಕಳ ಬಿಸಿಯೂಟಕ್ಕೂ ಬೆಲೆ ಏರಿಕೆ ಬಿಸಿ!

ಸೋಮವಾರ, 8 ನವೆಂಬರ್ 2021 (14:42 IST)
ಬೆಂಗಳೂರು : ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವಂತೆ ಸರ್ಕಾರ ಸೂಚಿಸಿದೆ.
ಆದರೆ ಬೆಲೆ ಏರಿಕೆ ಬಿಸಿ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೂ ತಟ್ಟಿದ್ದು, ಸರ್ಕಾರ ನಿಗದಿ ಪಡಿಸಿರುವ ಹಣದಲ್ಲಿ ಮಕ್ಕಳಿಗೆ ರುಚಿರುಚಿಯಾದ ಅಡುಗೆ ಮಾಡುವುದು ಕಷ್ಟವಾಗಿದೆ. ಮಕ್ಕಳಿಗೆ ಅನ್ನ, ಸಾಂಬಾರ್, ಬಿಸಿಬೇಳೆ ಬಾತ್, ಉಪ್ಪಿಟ್ಟು, ಪಲಾವ್ ಸೇರಿದಂತೆ ವಿವಿಧ ಖಾದ್ಯಗಳನ್ನ ತಯಾರಿಸಬೇಕು.
ಮಕ್ಕಳ ವಯಸ್ಸಿನ ಆಧಾರದ ಮೇಲೆ ಸರ್ಕಾರ ಹಣ ನಿಗದಿ ಪಡಿಸಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ 4.97 ರೂಪಾಯಿ, 6ರಿಂದ 8ನೇ ತರಗತಿಯ ಮಕ್ಕಳಿಗೆ 7.45 ರೂಪಾಯಿ, 9ರಿಂದ 10ನೇ ತರಗತಿ ಮಕ್ಕಳಿಗೆ 11.41 ರೂ. ಹಣವನ್ನು ಸರ್ಕಾರ ನಿಗದಿ ಪಡಿಸಿದೆ. ಆದರೆ ಇದೀಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಸರ್ಕಾರ ನೀಡುವ ಹಣದಲ್ಲಿ ಮಕ್ಕಳಿಗೆ ರುಚಿಯಾದ ಊಟ ನೀಡುವುದು ಕಷ್ಟಕರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ