ಇಂಧನಗಳ ಮೇಲಿನ ಬೆಲೆಯನ್ನ ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ನಿನ್ನೆ ಸಂಜೆಯಿಂದಲೇ ಅಧಿಕೃತವಾಗಿ ಪೆಟ್ರೋಲ್, ಡಿಸೇಲ್ ದರ ನಿಗಧಿಯಾಗಿದೆ.
ಇನ್ನು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ 10 ರೂಪಾಯಿ ಹಾಗೂ 5 ರೂಪಾಯಿಗೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆಯೇ, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ 14.34ಕ್ಕೆ ಇಳಿಸಿದೆ.. ಹೀಗಾಗಿ ಪೆಟ್ರೋಲ್ನ ಬೆಲೆ, ₹ 100.63ಕ್ಕೆ ಬಂದು ನಿಂತಿದ್ದು, ಡಿಸೇಲ್ನ ಬೆಲೆ 85.03ಪೈಸೆಗೆ ಬಂದಿಳಿದಿದೆ. ಸದ್ಯ ತೈಲ ಬೆಲೆ ಇಳಿಕೆಯಿಂದಾಗಿ ವಾಹನ ಸವಾರರು ಕೊಂಚ ರಿಲೀಫ್ ಆಗಿದ್ದಾರೆ.