ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡುವಾಗ ತಡಬಡಾಯಿಸಿದ ರಾಹುಲ್ ಗಾಂಧಿ

ಶನಿವಾರ, 24 ಮಾರ್ಚ್ 2018 (12:24 IST)
ಮೈಸೂರು: ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡದೇವತೆಗೆ ಪೂಜೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ಕೆಸಿ ವೇಣುಗೋಪಾಲ್ ಜತೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಇಲ್ಲಿ ದೇವಾಲಯದ ಆವರಣದಲ್ಲಿರುವ ಗಣಪತಿ ದೇವರಿಗೆ ಪೂಜೆ ಸಲ್ಲಿಸುವಾಗ ಕೊಂಚ ತಡಬಡಾಯಿಸಿದರು.

ಆರತಿ ಬಳಿಕ ದಕ್ಷಿಣೆ ಎಲ್ಲಿ ಇಡಬೇಕೆಂದು ಗೊಂದಲಕ್ಕೊಳಗಾದ ರಾಹುಲ್ ತಟ್ಟೆಗೆ ಹಾಕದೇ ಪಕ್ಕದಲ್ಲಿ ಹಾಕಿದ್ದರು. ನಂತರ ತಟ್ಟೆಗೆ ಹಾಕಿದರು. ಅರ್ಚಕರು ಕುಂಕುಮ ಹಾಕುವಾಗಲೂ ಕೊಂಚ ತಡಬಡಾಯಿಸಿದ ರಾಹುಲ್ ಗೆ ಸಿಎಂ ಸಹಾಯ ಮಾಡಿದರು. ನಂತರ ಸಿಎಂ ಸೂಚನೆ ಮೇರೆಗೆ ಅಲ್ಲಿದ್ದ ಎಲ್ಲಾ ನಾಯಕರಿಗೂ ಅರ್ಚಕರು ಕುಂಕುಮ ಹಾಕಿದರು.

ಎರಡು ದಿನಗಳ ಹಿಂದೆ ಮಂಗಳೂರಿನ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿದ್ದಾಗಲೂ ರಾಹುಲ್ ಕೊಂಚ ಗೊಂದಲಕ್ಕೊಳಗಾಗಿದ್ದರು. ಆರತಿ ಸ್ವೀಕರಿಸಿದ ಮೇಲೆ ಎಡಗೈಯಲ್ಲಿ ದಕ್ಷಿಣೆಯನ್ನು ಸ್ವಲ್ಪ ಅನುಮಾನಿಸುತ್ತಲೇ ಹಾಕಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ