ಮೋದಿ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ

ಬುಧವಾರ, 27 ಜೂನ್ 2018 (08:07 IST)
ನವದೆಹಲಿ : ಅತ್ಯಾಚಾರ ಹಾಗೂ ಹಿಂಸಾಚಾರದ ಕಾರಣಕ್ಕೆ ಭಾರತ ಮಹಿಳೆಯರಿಗೆ ಅಪಾಯಕಾರಿ ದೇಶ ಎಂದು ಸಮೀಕ್ಷೆಯಲ್ಲಿ ವರದಿಯಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ಮೋದಿ ಅವರ ಮೇಲೆ ಕಿಡಿಕಾರಿದ್ದಾರೆ.


ಥಾಮ್ಸನ್ ರಾಯ್ಟರ್ ಸಮೀಕ್ಷೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಪಾಯಕಾರಿ ರಾಷ್ಟ್ರಗಳು ಎಂದು ಉಲ್ಲೇಖಿಸಲಾದ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ‘ಪ್ರಧಾನಿ ಮೋದಿ ತಮ್ಮ ಉದ್ಯಾನದಲ್ಲಿ ಕಾಲಿನ ತುದಿ ಬೆರಳಲ್ಲಿ ನಿಂತು ಯೋಗ ಮಾಡುತ್ತಿರುವ ಸಂದರ್ಭ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹಿಂಸಾಚಾರದಲ್ಲಿ ಭಾರತ ಅಫಘಾನಿಸ್ತಾನ, ಸಿರಿಯಾ, ಸೌದಿ ಅರೇಬಿಯಾಕ್ಕಿಂತ ಮುಂಚೂಣಿಯಲ್ಲಿದೆ. ಇದು ಭಾರತಕ್ಕೆ ಎಂಥಾ ಅಪಮಾನ!" ಎಂದು ಟ್ವೀಟ್ ಮಾಡಿ  ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ