ನಾಲ್ಕು ವರ್ಷದ ಹಿಂದೆ ವಿರಾಟ್ ಕೊಹ್ಲಿ ಭಯಗೊಂಡಿದ್ದು ಇದೇ ಕಾರಣಕ್ಕೆ!

ಸೋಮವಾರ, 25 ಜೂನ್ 2018 (09:12 IST)
ಮುಂಬೈ: ವಿಶ್ವವನ್ನೇ ನಡುಗಿಸುವ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ನಾಲ್ಕು ವರ್ಷದ ಹಿಂದೆ ತೀರಾ ಭಯಪಟ್ಟಿದ್ದರಂತೆ! ಅದಕ್ಕೆ ಕಾರಣವೇನೆಂದು ಮಾಜಿ ನಾಯಕ ಸೌರವ್ ಗಂಗೂಲಿ ವಿವರಿಸಿದ್ದಾರೆ.

ಈಗ ಇಂಗ್ಲೆಂಡ್ ಸರಣಿಗೆ ವಿರಾಟ್ ಕೊಹ್ಲಿ ತಯಾರಿ ನಡೆಸುತ್ತಿದ್ದರೆ, ನಾಲ್ಕು ವರ್ಷದ ಹಿಂದೆ ಇದೇ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿದ್ದಾಗ ಅವರು ಭಯಗೊಂಡಿದ್ದರು ಎಂಬ ಅಂಶವನ್ನು ಗಂಗೂಲಿ ಬಹಿರಂಗಪಡಿಸಿದ್ದಾರೆ.

ಆ ಸರಣಿಯಲ್ಲಿ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೂ ನೀಡಿರಲಿಲ್ಲ. ಕಳೆದ ಪ್ರವಾಸದಲ್ಲಿ ಅಲ್ಲಿನ ಚೆನ್ನಾಗಿ ರನ್ ಗಳಿಸದೇ ಇದ್ದ ಕಾರಣಕ್ಕೆ ಅವರು ಭಯಗೊಂಡಿದ್ದರು. ಅದೇ ಕಾರಣಕ್ಕೆ ಬಹುಶಃ ಅವರು ಈ ಬಾರಿ ಪ್ರವಾಸಕ್ಕೆ ಮೊದಲು ಕೌಂಟಿ ಆಡಲು ಮುಂದಾದರು ಎಂದು ಗಂಗೂಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ