ರೆಪೋ ದರ ಹೆಚ್ಚಿಸಿದ ಆರ್ಬಿಐ

ಸೋಮವಾರ, 13 ಫೆಬ್ರವರಿ 2023 (16:18 IST)
ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.6.50 ಗೆ ಹೆಚ್ಚಳ ಮಾಡಿದೆ. ರೆಪೋ ದರವನ್ನು 25 ಮೂಲಾಂಶ ಅಂದರೆ, ಶೇ.6.50ಗೆ ಹೆಚ್ಚಿಸಲು ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬುಧವಾರ ಹಣಕಾಸು ನೀತಿ ಪ್ರಕಟಿಸಿ, ರೆಪೋ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದ್ದಾರೆ. ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಹೆಚ್ಚಳವಾಗಲಿದೆ. 

ಜಾಗತಿಕ ಆರ್ಥಿಕತೆಯು ಕೆಲವು ತಿಂಗಳುಗಳ ಹಿಂದೆ ಇದ್ದಂತೆ ಈಗ ಕಠಿಣವಾಗಿ ಕಾಣುತ್ತಿಲ್ಲ. ಹಣದುಬ್ಬರದ ನಡುವೆ ಪ್ರಮುಖ ಆರ್ಥಿಕತೆಗಳಲ್ಲಿನ ಬೆಳವಣಿಗೆಯ ನಿರೀಕ್ಷೆಗಳು ಸುಧಾರಿಸಿದೆ. ಆದರೂ ಹಣದುಬ್ಬರವು ಇನ್ನೂ ಪ್ರಮುಖ ಆರ್ಥಿಕತೆಗಳಲ್ಲಿ ಗುರಿಗಿಂತ ಉತ್ತಮವಾಗಿದೆ. 2023-24ರ 4ನೇ ತ್ರೈಮಾಸಿಕದಲ್ಲಿ ಹಣದುಬ್ಬರ ಸರಾಸರಿ 5.6% ಎಂದು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ