ನವದೆಹಲಿ : ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ ಹೆಚ್ಚಿಸಿದ ಬೆನ್ನಲ್ಲೇ ಹೆಚ್ಡಿಎಫ್ಸಿ ಬ್ಯಾಂಕ್ ಸಹ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.
ಹೆಚ್ಡಿಎಫ್ಸಿಯು ಕಳೆದ 5 ತಿಂಗಳಲ್ಲಿ 7ನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. ಈ ಕ್ರಮವು ಇಎಂಐ ಪಾವತಿಯನ್ನೂ ಹೆಚ್ಚಿಸಲಿದ್ದು, ಅಕ್ಟೋಬರ್ 1 ರಿಂದಲೇ ಈ ಕ್ರಮ ಜಾರಿಗೆ ಬರಲಿದೆ.
ಆರ್ಬಿಐ ಸತತ 4ನೇ ಬಾರಿಗೆ 50 ಬೇಸಿಸ್ ಪಾಯಿಂಟ್ ರೆಪೋ ದರ ಏರಿಕೆ ಮಾಡಿದೆ. ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿಯು ಮೂರು ದಿನಗಳ ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಆಗಸ್ಟ್ನಲ್ಲಿ 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದ್ದರಿಂದ ರೆಪೋ ದರ ಶೇ.5.4ಕ್ಕೆ ಏರಿತ್ತು. ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.