ಬೆಂಗಳೂರು : ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ ಬಳಿಕ ಬಳ್ಳಾರಿ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ.
ಹನ್ನೊಂದು ವರ್ಷಗಳ ಬಳಿಕ ಬಳ್ಳಾರಿಗೆ ಕಾಲಿಟ್ಟಿರುವ ರೆಡ್ಡಿ ಸುಮ್ಮನೇ ಕುಳಿತಿಲ್ಲ. ಹೌದು ಗಾಲಿ ಜನಾರ್ದನ ರೆಡ್ಡಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮಹಾನಗರ ಪಾಲಿಕೆಯ 39 ಸ್ಥಾನಗಳಿಗೆ ಏಪ್ರಿಲ್ 28 ರಂದು ಚುನಾವಣೆ ನಡೆದು, 30 ರಂದು ಮತೆಣಿಕೆಯೂ ಮುಗಿದಿತ್ತು. ನಗರದ ವ್ಯಾಪ್ತಿಯ 28 ಗ್ರಾಮೀಣ ವ್ಯಾಪ್ತಿಯ 11 ವಾರ್ಡ್ ಗಳಲ್ಲಿ ಕ್ರಮವಾಗಿ ಕಾಂಗ್ರೆಸ್ 21, ಬಿಜೆಪಿ 13 ಹಾಗೂ 5 ಜನ ಪಕ್ಷೇತರರಾಗಿ ಆಯ್ಕೆಯಾಗಿದ್ರು.
ಪಕ್ಷೇತರರಲ್ಲಿ ಈಗಾಗಲೇ 3 ಜನ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇನ್ನಿಬ್ಬರು ಸೇರ್ಒಡೆಯಾಗಲಿದ್ದಾರೆ . ಇದು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೇರುವ ಎಲ್ಲಾ ದಾರಿಗಳನ್ನು ಕ್ಲಿಯರ್ ಇದೆ. ಆದ್ರೆ ಈಗ ಬಿಜೆಪಿ ಚುನಾವಣೆ ನಡೆದು ಒಂಬತ್ತು ತಿಂಗಳು ಕಾಲ ಹರಣ ಮಾಡಿ ಪಾಲೀಕ ಮೇಯರ್ ಚುನಾವಣೆ ನಡೆಸುತ್ತಿಲ್ಲಾ.
ಕಾರಣ ಹೇಗಾದರೂ ಮಾಡಿ ಪಾಲಿಕೆ ಕಚೇರಿಯ ಮೇಲೆ ಬಿಜೆಪಿ ದ್ವಜ ಹಾರಿಸಬೇಕು ಎನ್ನುವ ಪ್ಲ್ಯಾನ್ ನಲ್ಲಿ ಇಲ್ಲಿನ ಬಿಜೆಪಿ ನಾಯಕರಿದ್ದಾರೆ. ಇನ್ನು ಪಕ್ಷೇತರರು ಸೇರಿದಂತೆ ಕಾಂಗ್ರೆಸ್ ಏಳು ಜನ ಪಾಲಿಕೆ ಮೆಂಬರ್ ಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಕುದುರೆ ವ್ಯಾಪಾರ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಬಂದ ಬಳಿಕ, ಬಳ್ಳಾರಿ ರಾಜಕೀಯದಲ್ಲಿ ಸಂಚಲನ ಮೂಡಿದ್ದು ಮಾತ್ರ ಸತ್ಯ. ಮುಂದಿನ ಎರಡು ದಿನಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಪಾಲಿಕೆ ಸದಸ್ಯರ ಕುದುರೆ ವ್ಯಾಪಾರದ ವೀಡಿಯೋ ರಿಲೀಸ್ ಆಗಲಿದೆ. ಆದರೆ ಇದಕ್ಕೆ ಉತ್ತರ ಕೊಡಲು ಸಹ ಬಿಜೆಪಿ ತಯಾರಿ ನಡೆಸಿದೆ.