ನವದೆಹಲಿ : 2024ರ ಆರ್ಥಿಕ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಭಾರೀ ಇಳಿಕೆ ಕಂಡಿದ್ದು, 92 ರೂ. ರಷ್ಟು ಕಡಿತಗೊಳಿಸಲಾಗಿದೆ.
ಈ ಹಿಂದೆ ಮಾರ್ಚ್ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್ನ ಬೆಲೆಗಳನ್ನು 350 ರೂ. ಹೆಚ್ಚಿಸಿತ್ತು. ಆದರೆ ಶನಿವಾರ 92 ರೂ. ಇಳಿಕೆಯಾಗಿದೆ.
ಆದರೆ ದೇಶೀಯ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಕಳೆದ ತಿಂಗಳು ಕೇಂದ್ರವು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ 2,028 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆಯೂ 1115.5 ರೂ. ಆಗಿದೆ. ಮುಂಬೈನಲ್ಲಿ 1112.5 ರೂ., ಕೋಲ್ಕತ್ತಾದಲ್ಲಿ 1,129 ಹಾಗೂ ಚೆನ್ನೈನಲ್ಲಿ 1118.5 ರೂ.ನಲ್ಲಿ ಖರೀದಿಸಬಹುದಾಗಿದೆ.