ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಲು ಸಾಧ್ಯವೇ ಇಲ್ಲ! ಮತ್ತೆ ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ
ಭಾನುವಾರ, 24 ಜೂನ್ 2018 (08:24 IST)
ನವದೆಹಲಿ: ಕಾಶ್ಮೀರ ಸ್ವಾತಂತ್ರ್ಯ ಬಯಸುತ್ತದೆ ಎಂದು ಹೇಳಿಕೆ ನೀಡಿ ಮೊನ್ನೆಯಷ್ಟೇ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್ ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ.
ಅಣ್ವಸ್ತ್ರ ದಾಳಿಯಾಗದೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಲು ಸಾಧ್ಯವೇ ಇಲ್ಲ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗಾಗಲೇ ಗುಲಾಂ ನಬಿ ಆಜಾದ್ ಭಾರತೀಯ ಸೈನಿಕರು ನಾಗರಿಕರನ್ನು ಕೊಲ್ಲುತ್ತಿದ್ದಾರೆ ಮತ್ತು ಸೈಫುದ್ದೀನ್ ಕಾಶ್ಮೀರ ಸ್ವಾತಂತ್ರ್ಯ ಬಯಸುತ್ತದೆ ಎಂದು ಹೇಳಿ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
ಇದೀಗ ಮತ್ತೆ ಮೊದಲಿನ ವಿವಾದ ತಣ್ಣಗಾಗುವ ಮೊದಲೇ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ರ ಸ್ವತಂತ್ರ ಕಾಶ್ಮೀರ ಐಡಿಯಾವನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕ್ ಆಳಲಿ, ಕಾಶ್ಮೀರ ಕಣಿವೆ ಭಾರತದ ಸುಪರ್ದಿಯಲ್ಲಿರಲಿ ಎಂದು ಸಲಹೆಯನ್ನೂ ನೀಡಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಗೆ ಮತ್ತಷ್ಟು ಮುಜುಗರ ತರುವುದಂತೂ ಸತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.