ಕೊರೊನಾದ ದೌರ್ಬಲ್ಯ ಕೊನೆಗೂ ಪತ್ತೆಹಚ್ಚಿದ ವಿಜ್ಞಾನಿಗಳು!

ಭಾನುವಾರ, 26 ಸೆಪ್ಟಂಬರ್ 2021 (12:53 IST)
ನವದೆಹಲಿ : ದಿನಕ್ಕೊಂದು ರೂಪ ಪಡೆದು ಇಡೀ ಜಗತ್ತನ್ನು ಕಂಗೆಡಿಸುತ್ತಿರುವ ಕೊರೊನಾ ವೈರಸ್ ದೌರ್ಬಲ್ಯವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಇದರಿಂದ ಅತ್ಯಂತ ಪರಿಣಾಮಕಾರಿ ಹಾಗೂ ಕಡಿಮೆ ಬೆಲೆಯಲ್ಲಿ ಔಷಧ ಕಂಡು ಹಿಡಿಯಲು ಸಹಕಾರಿ ಆಗಲಿದೆ ಎಂದು ಹೇಳಲಾಗಿದೆ.

ಲಾ ಜೊಲ್ಲ ಇನ್ಸಿಟಿಟ್ಯೂಟ್ ಆಫ್ ಇಮ್ಮುಂಗೊಲಿ ವಿಜ್ಞಾನಿಗಳು ಕೊರೊನಾ ವೈರಸ್ ಹೇಗೆ ಕಾರ್ಯಚರಿಸುತ್ತದೆ ಎಂಬ ಬಗ್ಗೆ ನಕ್ಷೆಯೊಂದನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ವಿಜ್ಞಾನಿಗಳು ಹೇಗೆ ರೂಪಾಂತರಿ ಆಗುತ್ತಿದೆ ಎಂಬ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಎಂದು ಬೂಮ್ ಬರ್ಗ್ ತಿಳಿಸಿದೆ.
ಸುಮಾರು 56 ವಿಜ್ಞಾನಿಗಳ ತಂಡ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಕಡಿಮೆ ಬೆಲೆಯಲ್ಲಿ ಔಷಧ ಅಥವಾ ಲಸಿಕೆ ಉತ್ಪಾದಿಸಲು ನೆರವು ನೀಡಲಿದ್ದಾರೆ ಎಂದು ಬೂಮ್ ಬರ್ಗ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ