ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಡ್ರಗ್ಸ್ ಚಾಕ್ಲೇಟ್ ಮಾರಾಟ!

ಶುಕ್ರವಾರ, 21 ಜುಲೈ 2023 (12:31 IST)
ಮಂಗಳೂರು : ಭಾರೀ ಪ್ರಮಾಣದ ಮತ್ತು ತರಿಸುವ ಡ್ರಗ್ಸ್ ಮಿಶ್ರಿತ ಒಂದು ಕ್ವಿಂಟಾಲ್ ಬಾಂಗ್ ಚಾಕ್ಲೇಟ್ಗಳನ್ನು ಪೊಲೀಸರು ವಶಪಡಿಸಿಕೊಂಡ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ (49) ಪೊಲೀಸರು ವಶಕ್ಕೆ ಪಡೆದ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಚಾಕ್ಲೇಟ್ಗಳು ಪತ್ತೆಯಾಗಿವೆ. ಇವುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಮಾರಾಟ ಮಾಡಲಾಗುತ್ತಿತ್ತು. ಉತ್ತರ ಭಾರತದಿಂದ ಇವುಗಳನ್ನು ತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ