ಅಧಿಕಾರಿಗಳ ಕೆಲ್ಸ ನೋಡಿ : ಸತ್ತವರ ಹೆಸರಿನಲ್ಲಿ ವ್ಯಾಕ್ಸಿನೇಷನ್!

ಗುರುವಾರ, 20 ಜನವರಿ 2022 (08:16 IST)
ಬೆಂಗಳೂರು : ವ್ಯಾಕ್ಸಿನೇಶನ್, ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳು ಅಡ್ಡದಾರಿ ಹಿಡಿದಂತೆ ಕಾಣುತ್ತಿದೆ.

ಸತ್ತವರ ಹೆಸರಿನಲ್ಲಿ ವ್ಯಾಕ್ಸಿನೇಷನ್, ಕೋವಿಡ್-19 ಟೆಸ್ಟ್ ರಿಪೋರ್ಟ್ ನೀಡಿರೋದು ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ದೋರನಹಳ್ಳಿ ನಿವಾಸಿ ಮುರಾರಿ ರಾವ್ ಶಿಂಧೆ ಎಂಬುವರು ಮೃತಪಟ್ಟ 3 ತಿಂಗಳಿಗೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಬಂದಿದೆ.

ಕಳೆದ ವರ್ಷದ ಮೇ 21ರಂದು ಮುರಾರಿ ರಾವ್ ಮೃತಪಟ್ಟಿದ್ದರು. ಆಗಸ್ಟ್ ತಿಂಗಳಲ್ಲಿ ಇವರು ಎರಡನೇ ಡೋಸ್ ಪಡೆದಂತೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ರಿಲೀಸ್ ಆಗಿದೆ.ಇದಲ್ಲದೆ 4 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ನೆಗೆಟಿವ್ ರಿಪೋರ್ಟ್ ನೀಡಲಾಗಿದೆ. ಜೂನ್ 12 ರಂದು ಯಾದಗಿರಿಯ ಯಮನಪ್ಪ ಮೃತಪಟ್ಟಿದ್ದರು.

ಆದರೆ ಆರೋಗ್ಯ ಇಲಾಖೆ ನವೆಂಬರ್ನಲ್ಲಿ ಅವರಿಗೆ ನೆಗೆಟಿವ್ ರಿಪೋರ್ಟ್ ನೀಡಿದೆ. ಯಾಕೆ ಹೀಗೆ ಎಂದು ಕೇಳಿದ್ರೆ, ಇದು ಹೊಸ ಸಿಬ್ಬಂದಿ ಯಡವಟ್ಟು ಎಂದು ಯಾದಗಿರಿ ಡಿಹೆಚ್ಓ ಜಾರಿಕೊಳ್ತಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ