ಇಂಫಾಲ್: ಎಲ್ಲಾ ರೀತಿಯ ಎಚ್ಚರಿಕೆ, ಸಮಂಜಸವಾದ ಬಲ ಪ್ರಯೋಗಕ್ಕೂ ಜಗ್ಗದೇ ಹೋದರೆ ಶೂಟೌಟ್ ಮಾಡಿ ಎಂದು ಅಧಿಕಾರಿಗಳಿಗೆ ಮಣಿಪುರ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿಭಟನಾಕಾರರನ್ನು ಎಲ್ಲಾ ರೀತಿಯಲ್ಲೂ ಮನವೊಲಿಸಿ, ಎಚ್ಚರಿಕೆ ನೀಡಿ, ಸಮಂಜಸವಾದ ಬಲ ಪ್ರಯೋಗ ಮಾಡಿ. ಇದ್ಯಾವುದಕ್ಕೂ ಬಗ್ಗದೇ ಹೋದರೆ, ವಿಪರೀತ ಪರಿಸ್ಥಿತಿ ಪ್ರಕರಣಗಳಲ್ಲಿ ಗುಂಡು ಹಾರಿಸಿ ಎಂದು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಿಗೆ ಆದೇಶಿಸಿದೆ.
ರಾಜ್ಯದಲ್ಲಿ ಕ್ಷಣಕ್ಷಣವೂ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೇ ರಾಜಧಾನಿ ಇಂಫಾಲ್ಗೂ ಹರಡುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ, ಭದ್ರತೆಯನ್ನು ಬಲಪಡಿಸಲು ಸೂಚನೆ ನೀಡಿದೆ. 55 ಸೇನಾ ಕಾಲಂಗಳನ್ನು ನಿಯೋಜಿಸಲಾಗಿದೆ.