ಸಿಂಗಾಪುರ-ಭಾರತ ವಿಮಾನಯಾನ ಪುನಾರಂಭ

ಸೋಮವಾರ, 22 ನವೆಂಬರ್ 2021 (20:27 IST)
ಕೋವಿಡ್  ಕಾರಣದಿಂದ ನಿಂತು ಹೋಗಿದ್ದ ಸಿಂಗಾಪುರ-ಭಾರತ ವಿಮಾನಯಾನ ನವೆಂಬರ್ 29 ರಿಂದ ಪುನಾರಂಭವಾಗಲಿದೆ.
ನಿಗದಿತ ಪ್ರಯಾಣಿಕ ವಿಮಾನಗಳನ್ನು ಪುನರಾರಂಭಿಸುವ ಕುರಿತು ಸಿವಿಲ್ ಏವಿಯೇಷನ್ ಅಥಾರಿಟಿ ಆಫ್ ಸಿಂಗಾಪುರ್ನೊಂದಿಗೆ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ. ನವೆಂಬರ್ 29ರಿಂದ ಚೆನ್ನೈ, ದೆಹಲಿ ಹಾಗೂ ಮುಂಬೈನಿಂದ ಪ್ರತಿದಿನ ಆರು ವಿಮಾನಗಳನ್ನು ಭಾರತ- ಸಿಂಗಾಪುರ ಪ್ರವಾಸಕ್ಕಾಗಿ ನಿಗದಿಪಡಿಸಲಾಗಿದೆ. ಒಪ್ಪಂದದ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸುಗಳನ್ನು ಪಡೆದವರು ಸಿಂಗಾಪುರ ಪ್ರವೇಶಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ