ಭಾರತದಲ್ಲಿ ಕೋವಿಡ್ ಮಾತ್ರೆಗಳು ಯಾವಾಗ ಲಭ್ಯ!

ಶನಿವಾರ, 20 ನವೆಂಬರ್ 2021 (09:54 IST)
ಬೆಂಗಳೂರು : ಕೋವಿಡ್ ಸೋಂಕನ್ನು ಲಸಿಕೆಯ ಬದಲಿಗೆ ಮಾತ್ರೆಗಳ ಮೂಲಕ ಹತೋಟಿಗೆ ತರುವ ಬಗ್ಗೆ ಸಂಶೋಧನೆ ನಡೆಯುತ್ತಿದ್ದು,
ಪ್ಯಾಕ್ಸ್ಲೋವಿಡ್ ಹಾಗೂ ಮೊಲ್ನುಪೆರಾವಿರ್ ಎನ್ನುವ ಎರಡು ಮಾತ್ರೆಗಳ ಪ್ರಯೋಗ ಹಲವು ದೇಶಗಳಲ್ಲಿ ನಡೆಯುತ್ತಿದೆ.
''ನಮ್ಮ ದೇಶದಲ್ಲಿ ಈ ಎರಡೂ ಮಾತ್ರೆಗಳ ಬಗ್ಗೆ ಸಾಕಷ್ಟು ಪ್ರಯೋಗ ಮಾಡಬೇಕಿದ್ದು, ಆರು ತಿಂಗಳೊಳಗೆ ಬರುವ ನಿರೀಕ್ಷೆ ಇದೆ. ಮೊಲ್ನುಪೆರಾವಿರ್ ಅನ್ನು ಈಗಾಗಲೇ ದೇಶದ ಕೆಲವು ಕಡೆ ಪ್ರಯೋಗ ಮಾಡಲಾಗುತ್ತಿದೆ. ಇನ್ನೂ ಔಷಧಿ ನಿಯಂತ್ರಕರು ಇದಕ್ಕೆ ಹಸಿರು ನಿಶಾನೆ ತೋರಿಸಿಲ್ಲದ ಕಾರಣ ಈಗಾಗಲೇ ಬಳಕೆಗೆ ಲಭ್ಯವಿಲ್ಲ," ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಮೈಸೂರು.
'ಈ ಎರಡು ಮಾತ್ರೆಗಳನ್ನು ಯಾರು ಕೋವಿಡ್ ಸೋಂಕಿಗೆ ತುತ್ತಾಗಿರುತ್ತಾರೋ ಅಂಥವರಿಗೆ ನೀಡಲಾಗುತ್ತದೆ. ಲಸಿಕೆ ಹಾಗೆ ಎಲ್ಲರೂ ತೆಗೆದುಕೊಳ್ಳುವ ಹಾಗಿಲ್ಲ. ಈ ಮಾತ್ರೆಗಳು ಸೋಂಕಿತರನ್ನು ಆಸ್ಪತ್ರೆ ಹೋಗುವುದನ್ನು ತಪ್ಪಿಸುತ್ತವೆ. ಇವಗಳಿಗೆ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ಕೊಟ್ಟ ನಂತರ ಇದನ್ನು ಹೇಗೆ ಉಪಯೋಗಿಸಬೇಕು ಎನ್ನುವುದಕ್ಕೆ ಕೆಲವು ಮಾರ್ಗಸೂಚಿಯನ್ನು ಕೂಡ ಬಿಡುಗಡೆ ಮಾಡುತ್ತದೆ' ಎನ್ನುತ್ತಾರೆ ಡಾ. ಸತ್ಯನಾರಾಯಣ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ