ಮುಂದೆಯೂ ಮೋದಿಯೇ ಪ್ರಧಾನಿಯಾದರೆ ಭಾರತಕ್ಕೆ ಉಳಿಗಾಲ: ಎಸ್ ಎಲ್ ಭೈರಪ್ಪ

ಶನಿವಾರ, 23 ಜೂನ್ 2018 (10:07 IST)
ಬೆಂಗಳೂರು: ದೇಶದ ಒಳಿತಿಗಾಗಿ ಮುಂದೆಯೂ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕು ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಂಸದ ಪ್ರತಾಪ್ ಸಿಂಹ ಭೈರಪ್ಪ ನಿವಾಸಕ್ಕೆ ತೆರಳಿ ಜನ ಸಂಪರ್ಕ ಕಾರ್ಯಕ್ರಮದ ಅಂಗವಾಗಿ ಕೇಂದ್ರದ ಸಾಧನೆಗಳ ಬಗ್ಗೆ ವಿವರಣೆ ನೀಡಿದ್ದಲ್ಲದೆ ಕಿರು ಹೊತ್ತಿಗೆಯನ್ನೂ ನೀಡಿದರು. ಈ ಸಂದರ್ಭದಲ್ಲಿ ಅವರು ಮೋದಿ ಪರವಾಗಿ ಮಾತನಾಡಿದರು.

‘ಹಿಂದೆ ಬಂದ ಪ್ರಧಾನಿಗಳು ಮೋದಿಯಷ್ಟೇ  ಬುದ್ಧಿವಂತರಾಗಿದ್ದಿರಬಹುದು. ಆದರೆ ಮೋದಿಯಂತಹ ದೇಶದ ಹಿತಕ್ಕಾಗಿ ದುಡಿಯುವ ಪ್ರಧಾನಿಯನ್ನು ಕಂಡಿಲ್ಲ.  ಇನ್ನು  2-3 ಅವಧಿಗೆ ಅವರೇ ಪ್ರಧಾನಿಯಾಗಿರಲಿ. ಒಂದು ವೇಳೆ ಅವರ ಹೊರತಾಗಿ ಇತರರು ಸಮ್ಮಿಶ್ರ ಸರ್ಕಾರ ರಚಿಸಿದರೆ ಸಿಕ್ಕಿದವರಿಗೆ ಸೀರುಂಡೆ ಎನ್ನುವ ಹಾಗಾಗಬಹುದು’ ಎಂದು ಭೈರಪ್ಪ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ