ರಾಹುಲ್ ಗಾಂಧಿ ಸಭೆಗೆ ತಾಯಿ ಸೋನಿಯಾ ಗಾಂಧಿ ಗೈರು
ನಿನ್ನೆಯ ಸಭೆಗೆ ಕಾರಣಾಂತರಗಳಿಂದ ಸೋನಿಯಾ ಗಾಂಧಿ ಬಂದಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಇದೇ ಎರಡನೇ ಬಾರಿಗೆ ರಾಹುಲ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಭೆ ನಡೆಯಿತು.
ಸಭೆಯಲ್ಲಿ ಎನ್ ಆರ್ ಸಿ ವಿಚಾರ, ರಫೇಲ್ ಯುದ್ಧ ವಿಮಾನ ಒಪ್ಪಂದ ಖರೀದಿ ವಿಚಾರಗಳು ಚರ್ಚೆಯಾದವು ಎನ್ನಲಾಗಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಮತ್ತಷ್ಟು ಒತ್ತಡ ಹೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.