ಇಂದಿನಿಂದ 5 ದಿನ ಸಂಸತ್ ವಿಶೇಷ ಅಧಿವೇಶನ

ಸೋಮವಾರ, 18 ಸೆಪ್ಟಂಬರ್ 2023 (07:57 IST)
ನವದೆಹಲಿ : ಸೋಮವಾರದಿಂದ 5 ದಿನಗಳ ಕಾಲ ಸಂಸತ್ನ ವಿಶೇಷ ಅಧಿವೇಶನವನ್ನು ಸರ್ಕಾರ ನಡೆಸಲಿದೆ.
 
ಇಂದು ಹಳೆ ಸಂಸತ್ ಭವನದಲ್ಲಿ ಕಲಾಪ ಆರಂಭವಾಗಿ ನಾಳೆ ಹೊಸ ಸಂಸತ್ ಭವನಕ್ಕೆ ಕಲಾಪ ವರ್ಗಾವಣೆಯಾಗಲಿದೆ. ನಾಳೆಯಿಂದ ಹೊಸ ಸಂಸತ್ ಭವನದ ಕಟ್ಟಡದಲ್ಲಿ ಅಧಿಕೃತ ಕಲಾಪ ಆರಂಭವಾಗಲಿದೆ.

ಸಂಸತ್ ವಿಶೇಷ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ. ಸಂಸತ್ ಅಧಿವೇಶನ ಕರೆಯಲು ಕಾರಣ ಎಣು ಎಂಬ ಪ್ರಶ್ನೆ ಮೂಡಿದ್ದು, ಮೋದಿ ಸರ್ಕಾರ ಅಚ್ಚರಿಯ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಹಿಳಾ ಮೀಸಲಾತಿ, ಒನ್ ನೇಷನ್ ಒನ್ ಎಲೆಕ್ಷನ್, ಇಂಡಿಯಾ ಹೆಸರು ಬದಲಾವಣೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಲೆಕ್ಕಾಚಾರಗಳನ್ನು ಊಹಿಸಲಾಗುತ್ತಿದೆ. ವಿಶೇಷ ಅಧಿವೇಶದ ಜೊತೆಗೆ ಬಿಲ್ಗಳ ಮಂಡನೆಯ ಸಾಧ್ಯತೆಯೂ ಇದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ